ETV Bharat / bharat

ಇಂದು ಲೋಕ ಸಮರದ ಮೊದಲ ಹಂತ - 102 ಕ್ಷೇತ್ರಗಳಿಗೆ ಮತದಾನ: 1,625 ಅಭ್ಯರ್ಥಿಗಳು, 16.63 ಕೋಟಿ ಮತದಾರರು! - Lok Sabha Election 1st Phase - LOK SABHA ELECTION 1ST PHASE

ದೇಶಾದ್ಯಂತ 543 ಲೋಕಸಭಾ ಕ್ಷೇತ್ರಗಳ ಪೈಕಿ ಇಂದು 102 ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ ನಡೆಯಲಿದೆ. ಮತದಾನಕ್ಕೆ ಭದ್ರತೆ ಸೇರಿ ಸಕಲ ವ್ಯವಸ್ಥೆಯನ್ನು ಕೇಂದ್ರ ಚುನಾವಣಾ ಆಯೋಗ ಮಾಡಿಕೊಂಡಿದೆ.

1st Phase Lok Sabha Elections
ಮೊದಲ ಹಂತದ ಲೋಕಸಭೆ ಚುನಾವಣೆ
author img

By ETV Bharat Karnataka Team

Published : Apr 19, 2024, 5:31 AM IST

Updated : Apr 19, 2024, 9:09 AM IST

ನವದೆಹಲಿ: 18ನೇ ಲೋಕಸಭಾ ಚುನಾವಣೆಗೆ ದೇಶ ಸಜ್ಜಾಗಿದೆ. ಇಂದು (ಏಪ್ರಿಲ್​ 19) ಮೊದಲ ಹಂತದಲ್ಲಿ 3 ಕೇಂದ್ರಾಡಳಿತ ಪ್ರದೇಶಗಳು ಸೇರಿ 18 ರಾಜ್ಯಗಳ 102 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಈ ಮೂಲಕ ದೇಶದ ಇತಿಹಾಸದಲ್ಲೇ ಎರಡನೇ ಅತಿದೊಡ್ಡ ಚುನಾವಣಾ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. 1951-52ರ ಚುನಾವಣೆ ಸುದೀರ್ಘ ಎರಡು ತಿಂಗಳ ಕಾಲ ನಡೆದಿತ್ತು. ಈ ಬಾರಿಯ ಚುನಾವಣೆ 44 ದಿನಗಳ ಕಾಲ ನಡೆಯಲಿದೆ.

ಮೊದಲ ಹಂತದ ಚುನಾವಣೆ ಮಾಹಿತಿ
ಮೊದಲ ಹಂತದ ಚುನಾವಣೆ ಮಾಹಿತಿ

ದೇಶಾದ್ಯಂತ 543 ಲೋಕಸಭಾ ಸ್ಥಾನಗಳಿಗೆ ಏಳು ಹಂತಗಳಲ್ಲಿ ಚುನಾವಣೆ ನಡೆಯುತ್ತದೆ. ಜೂನ್ 4ರಂದು ಮತ ಎಣಿಕೆ. ಇಂದು ಮೊದಲ ಹಂತಕ್ಕೆ ನಡೆಯುವ ಮತದಾನ ಬೆಳಗ್ಗೆ 7 ಗಂಟೆಗೆ ಪ್ರಾರಂಭವಾಗಿ ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ. ಆದರೂ, ಕೆಲವು ಕ್ಷೇತ್ರಗಳಲ್ಲಿ ಮತದಾನದ ಸಮಯ ಬದಲಾಗಲಿದೆ. ಗುರುವಾರ ಸಂಜೆಯೇ ಚುನಾವಣಾ ಸಿಬ್ಬಂದಿ ತಮ್ಮತಮ್ಮ ಮತಗಟ್ಟೆಗಳಿಗೆ ಬಂದು ಸೇರಿದ್ದಾರೆ. ಮತದಾನಕ್ಕೆ ಚುನಾವಣಾ ಆಯೋಗ ಭದ್ರತೆ ಸೇರಿ ಸಕಲ ವ್ಯವಸ್ಥೆಗಳನ್ನು ಮಾಡಿಕೊಂಡಿದೆ.

ಕಣದಲ್ಲಿ 1,625 ಅಭ್ಯರ್ಥಿಗಳು: ಮೊದಲ ಹಂತದ ಚುನಾವಣಾ ಕಣದಲ್ಲಿ ಎಂಟು ಕೇಂದ್ರ ಸಚಿವರು, ಇಬ್ಬರು ಮಾಜಿ ಮುಖ್ಯಮಂತ್ರಿಗಳು ಮತ್ತು ಒಬ್ಬ ಮಾಜಿ ರಾಜ್ಯಪಾಲ ಸೇರಿದಂತೆ ಒಟ್ಟಾರೆ 1,625 ಅಭ್ಯರ್ಥಿಗಳಿದ್ದಾರೆ. ಬಿಜೆಪಿ, ಕಾಂಗ್ರೆಸ್​ ಸೇರಿ ಒಟ್ಟು 194 ಪಕ್ಷಗಳಿಂದ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇವರಲ್ಲಿ 1,490 ಪುರುಷ ಅಭ್ಯರ್ಥಿಗಳು, 135 ಮಹಿಳಾ ಅಭ್ಯರ್ಥಿಗಳಿದ್ದಾರೆ.

ಮೊದಲ ಹಂತದ ಚುನಾವಣೆ ಮಾಹಿತಿ
ಮೊದಲ ಹಂತದ ಚುನಾವಣೆ ಮಾಹಿತಿ

ಬಿಜೆಪಿಯಿಂದ 77, ಕಾಂಗ್ರೆಸ್ 56, ಬಿಎಸ್​ಪಿ 86, ಎಐಎಡಿಎಂಕೆ 36, ಡಿಎಂಕೆ 22, ಆರ್​ಡಿಜೆ 34 ಹಾಗೂ ಪಕ್ಷೇತರರಾಗಿ 890 ಅಭ್ಯರ್ಥಿಗಳು ಅಖಾಡಕ್ಕೆ ಧುಮುಕಿದ್ದಾರೆ. ಮುಸ್ಲಿಂ ಸಮುದಾಯದ 79 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ತಮಿಳುನಾಡಿನ ಕರೂರಿನಲ್ಲಿ ಅತಿ ಹೆಚ್ಚು 54 ಅಭ್ಯರ್ಥಿಗಳಿದ್ದರೆ, ದಿಬ್ರುಗಢ ಮತ್ತು ನಾಗಾಲ್ಯಾಂಡ್ ಕ್ಷೇತ್ರದಲ್ಲಿ ಅತಿ ಕಡಿಮೆ 3 ಅಭ್ಯರ್ಥಿಗಳಿದ್ದಾರೆ.

ಪ್ರಮುಖ ಸ್ಪರ್ಧಿಗಳು: ಮಹಾರಾಷ್ಟ್ರದ ನಾಗ್ಪುರದಿಂದ ನಿತಿನ್ ಗಡ್ಕರಿ, ಅರುಣಾಚಲ ಪ್ರದೇಶದ ಪಶ್ಚಿಮ ಕ್ಷೇತ್ರದಿಂದ ಕಿರಣ್ ರಿಜಿಜು, ಬಿಕಾನೇರ್‌ನಿಂದ ಅರ್ಜುನ್ ರಾಮ್ ಮೇಘವಾಲ್, ಅಸ್ಸಾಂನ ದಿಬ್ರುಗಢದಿಂದ ಮಾಜಿ ಸಿಎಂ ಸರ್ಬಾನಂದ ಸೋನೋವಾಲ್, ಪಶ್ಚಿಮ ಉತ್ತರ ಪ್ರದೇಶದ ಮುಜಾಫರ್‌ನಗರದಿಂದ ಸಂಜೀವ್ ಬಲಿಯಾನ್, ಜಮ್ಮು ಮತ್ತು ಕಾಶ್ಮೀರದ ಉಧಂಪುರದಿಂದ ಜಿತೇಂದ್ರ ಸಿಂಗ್ ಮತ್ತು ರಾಜಸ್ಥಾನದ ಅಲ್ವಾರ್‌ನಿಂದ ಭೂಪೇಂದ್ರ ಯಾದವ್ ಅಖಾಡದಲ್ಲಿರುವ ನಾಯಕರಲ್ಲಿ ಪ್ರಮುಖರು.

ಮೊದಲ ಹಂತದ ಚುನಾವಣೆ ಮಾಹಿತಿ
ಮೊದಲ ಹಂತದ ಚುನಾವಣೆ ಮಾಹಿತಿ

ಸಕ್ರಿಯ ರಾಜಕೀಯಕ್ಕೆ ಮರಳಲು ತೆಲಂಗಾಣದ ರಾಜ್ಯಪಾಲೆ ಮತ್ತು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಹುದ್ದೆಗೆ ಇತ್ತೀಚೆಗೆ ರಾಜೀನಾಮೆ ನೀಡಿದ ತಮಿಳಿಸೈ ಸೌಂದರರಾಜನ್ ಚೆನ್ನೈ ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಕಮಲ್ ನಾಥ್ ಪುತ್ರ ನಕುಲ್ ನಾಥ್ ಛಿಂದ್ವಾರಾ ಕ್ಷೇತ್ರದಿಂದ ಮರು ಆಯ್ಕೆ ಬಯಸಿದ್ದಾರೆ. ತ್ರಿಪುರಾದ ಎರಡು ಲೋಕಸಭಾ ಕ್ಷೇತ್ರಗಳ ಪೈಕಿ ಮೊದಲ ಹಂತದಲ್ಲಿ ಮತದಾನ ನಡೆಯಲಿರುವ ಪಶ್ಚಿಮ ತ್ರಿಪುರಾ ಕ್ಷೇತ್ರದಲ್ಲಿ ಮಾಜಿ ಸಿಎಂ ಬಿಪ್ಲಬ್ ಕುಮಾರ್ ದೇಬ್ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಆಶಿಶ್ ಕುಮಾರ್ ಸಹಾ ಸ್ಪರ್ಧೆಯಿಂದ ಹೈವೋಲ್ಟೇಜ್ ಕಣವಾಗಿ ಮಾರ್ಪಟ್ಟಿದೆ.

ಹಿರಿ-ಕಿರಿಯ ಅಭ್ಯರ್ಥಿಗಳು: ಚುನಾವಣಾ ಅಖಾಡದಲ್ಲಿ ಯುವಕರಿಂದ ಹಿಡಿದು 80ರಿಂದ 90 ವರ್ಷ ವಯಸ್ಸಿನ ವೃದ್ಧರೂ ಸಹ ಇದ್ದಾರೆ. ಅತಿ ಹಿರಿಯ ಅಭ್ಯರ್ಥಿ ಎಂದರೆ, ಸಿದ್ಧಿ ಕ್ಷೇತ್ರದ ಭಗವಾನ್​ ಪ್ರಸಾದ್​ ತಿವಾರಿ. 83 ವರ್ಷದ ವಯೋವೃದ್ಧರಾದ ಇವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗಮನ ಸೆಳೆದಿದ್ದಾರೆ. 25 ವರ್ಷ ವಯಸ್ಸಿನ ಆರು ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ತಮಿಳುನಾಡಿನಲ್ಲಿ ಇಬ್ಬರು, ಬಿಹಾರ, ಪುದುಚೇರಿ, ಉತ್ತರಾಖಂಡ್, ಮಧ್ಯಪ್ರದೇಶದಲ್ಲಿ ಈ ಕಿರಿಯ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

16.63 ಕೋಟಿ ಮತದಾರರು: ಏಳು ಹಂತಗಳ ಚುನಾವಣೆಯಲ್ಲಿ ಮೊದಲ ಹಂತವೇ ಅತಿದೊಡ್ಡ ಹಂತವಾಗಿದೆ. 102 ಕ್ಷೇತ್ರಗಳಲ್ಲಿ 16.63 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಈ ಮತದಾರರಲ್ಲಿ 8.4 ಕೋಟಿ ಪುರುಷರು, 8.23 ಕೋಟಿ ಮಹಿಳೆಯರು ಮತ್ತು 11,371 ತೃತೀಯಲಿಂಗಿಗಳು ಸೇರಿದ್ದಾರೆ. ಇವರಲ್ಲಿ 35.67 ಲಕ್ಷ ಮೊದಲ ಬಾರಿಗೆ ಮತದಾರರು, 20-29 ವರ್ಷ ವಯಸ್ಸಿನ 3.51 ಕೋಟಿ ಯುವ ಮತದಾರರಿದ್ದಾರೆ.

18 ಲಕ್ಷಕ್ಕೂ ಹೆಚ್ಚು ಸಿಬ್ಬಂದಿ: ಚುನಾವಣಾ ಆಯೋಗವು 1.87 ಲಕ್ಷ ಮತಗಟ್ಟೆಗಳಲ್ಲಿ 18 ಲಕ್ಷಕ್ಕೂ ಹೆಚ್ಚು ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿದೆ. ಮತಗಟ್ಟೆ ಮತ್ತು ಭದ್ರತಾ ಸಿಬ್ಬಂದಿಯನ್ನು ಸಾಗಿಸಲು ಒಟ್ಟು 41 ಹೆಲಿಕಾಪ್ಟರ್‌ಗಳು, 84 ವಿಶೇಷ ರೈಲುಗಳು ಮತ್ತು ಸುಮಾರು ಒಂದು ಲಕ್ಷ ವಾಹನಗಳನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದೆ.

50ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ಮಾಡಲಾಗುವುದು ಮತ್ತು ಎಲ್ಲ ಮತಗಟ್ಟೆಗಳಲ್ಲಿ ಮೈಕ್ರೋ ಅಬ್ಸರ್ವರ್‌ಗಳನ್ನು ನಿಯೋಜಿಸಲಾಗಿದೆ. ಚುನಾವಣೆಗೆ ಕೆಲವು ದಿನಗಳ ಮೊದಲೇ ಹೆಚ್ಚುವರಿಯಾಗಿ 361 ವೀಕ್ಷಕರು, 127 ಸಾಮಾನ್ಯ ವೀಕ್ಷಕರು, 67 ಪೊಲೀಸ್ ಮತ್ತು 167 ಖರ್ಚುವೆಚ್ಚ ವೀಕ್ಷಕರು ತಮ್ಮ ಕ್ಷೇತ್ರ-ಕ್ಷೇತ್ರಗಳಲ್ಲಿ ಮೊಕ್ಕಾಂ ಹೂಡಿದ್ದಾರೆ. ಕೆಲವು ರಾಜ್ಯಗಳಲ್ಲಿ ವಿಶೇಷ ವೀಕ್ಷಕರನ್ನೂ ಸಹ ನಿಯೋಜಿಸಲಾಗಿದೆ.

Last Updated : Apr 19, 2024, 9:09 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.