ETV Bharat / bharat

ಆಂಧ್ರ- ಬಿಹಾರಕ್ಕೆ ಬಜೆಟ್ ಜಾಕ್​ಪಾಟ್: ಅಮರಾವತಿ ಅಭಿವೃದ್ಧಿಗೆ 15 ಸಾವಿರ ಕೋಟಿ, ಬಿಹಾರಕ್ಕೆ 26 ಸಾವಿರ ಕೋಟಿ ಬಂಪರ್​ ಅನುದಾನ! - SPECIAL ASSISTANCE FOR ANDRA BIHAR - SPECIAL ASSISTANCE FOR ANDRA BIHAR

ಆಂಧ್ರಪ್ರದೇಶಕ್ಕೆ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಬಂಪರ್‌ ಅನುದಾನ ಸಿಕ್ಕಿದೆ. ನೂತನ ರಾಜಧಾನಿ ಅಮರಾವತಿ ಅಭಿವೃದ್ಧಿಗೆ 15 ಸಾವಿರ ಕೋಟಿ ರೂ ವಿಶೇಷ ನೆರವು ಪ್ರಕಟಿಸಲಾಗಿದೆ.

AMARAVATI BUDGET 2024  UNION BUDGET 2024  UNION BUDGET FOR ANDHRA PRADESH
ಆಂಧ್ರಪ್ರದೇಶಕ್ಕೆ ಕೇಂದ್ರ ಬಜೆಟ್‌ನಲ್ಲಿ ಜಾಕ್​ಪಾಟ್ (ETV Bharat)
author img

By ETV Bharat Karnataka Team

Published : Jul 23, 2024, 12:08 PM IST

Updated : Jul 23, 2024, 7:33 PM IST

ಪಾಟ್ನಾ/ ವಿಜಯವಾಡ (ಬಿಹಾರ, ಆಂಧ್ರ): ಎನ್​​ಡಿಎದ ಪ್ರಮುಖ ಮಿತ್ರಪಕ್ಷಗಳಾದ ಜೆಡಿಯು ಆಡಳಿತ ಇರುವ ಬಿಹಾರ ಹಾಗೂ ಚಂದ್ರಬಾಬು ನಾಯ್ಡು ಆಡಳಿತ ಇರುವ ಆಂಧ್ರಪ್ರದೇಶಕ್ಕೆ ಕೇಂದ್ರ ಬಜೆಟ್​​​​ನಲ್ಲಿ ಬಂಪರ್​ ಆಫರ್​​ಗಳೇ ಸಿಕ್ಕಿವೆ. ಅಮರಾವತಿ ಅಭಿವೃದ್ಧಿಗೆ 15 ಸಾವಿರ ಕೋಟಿ ರೂಗಳ ವಿಶೇಷ ಪ್ಯಾಕೇಜ್​ ಘೋಷಣೆ ಮಾಡಲಾಗಿದ್ದರೆ, ಅತ್ತ ಬಿಹಾರಕ್ಕೆ ಅನಾಮತ್ತಾಗಿ 26 ಸಾವಿರ ಕೋಟಿ ರೂಗಳ ಯೋಜನೆಗಳನ್ನು ಘೋಷಿಸಲಾಗಿದೆ.

ಬಿಹಾರಕ್ಕೆ ಎರಡೆರಡು ಬಂಪರ್​: ವಿಶೇಷ ಸ್ಥಾನಮಾನದ ಕುರಿತು ನಡೆಯುತ್ತಿರುವ ಚರ್ಚೆಯ ನಡುವೆಯೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್‌ನಲ್ಲಿ ಬಿಹಾರದ ಪ್ರಮುಖ ಯೋಜನೆಗಳಿಗೆ 26,000 ಕೋಟಿ ರೂಪಾಯಿಗಳನ್ನು ಮೀಸಲಿಡುವುದಾಗಿ ಘೋಷಿಸಿದ್ದಾರೆ. ಈ ನಿಧಿಯು ಗಯಾದಲ್ಲಿ ಕೈಗಾರಿಕಾ ಬೆಳವಣಿಗೆಗೆ ಮತ್ತು ನಳಂದಾವನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ.

ಬೋಧಗಯಾವನ್ನು ಗೌತಮ ಬುಧನು ಜ್ಞಾನೋದಯ ಮಾಡಿದ ಸ್ಥಳ ಎಂದೂ ಕರೆಯುತ್ತಾರೆ. ಈ ಸ್ಥಳವನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಲಾಗಿದೆ. ಗಯಾದ ಪಕ್ಕದಲ್ಲಿ ನಳಂದಾ, ರಾಜ್ಯದ ಮತ್ತೊಂದು ಪ್ರಮುಖ ಪ್ರವಾಸಿ ತಾಣವಾಗಿದೆ. ನಳಂದಾ ವಿಶ್ವವಿದ್ಯಾಲಯವು ಪ್ರಪಂಚದಾದ್ಯಂತದ ವಿದ್ವಾಂಸರಿಗೆ ಪ್ರಮುಖ ಆಕರ್ಷಣೆಯಾಗಿದೆ.

ಅಷ್ಟೇ ಅಲ್ಲ ಹೊಸ ವಿಮಾನ ನಿಲ್ದಾಣಗಳು, ವೈದ್ಯಕೀಯ ಕಾಲೇಜುಗಳು ಮತ್ತು ಕ್ರೀಡಾ ಮೂಲಸೌಕರ್ಯಗಳನ್ನು ನಿರ್ಮಿಸಲು ಈ ವಿಶೇಷ ಪ್ಯಾಕೇಜ್​ನಲ್ಲಿ ಹಣವನ್ನು ನೀಡುವ ಘೋಷಣೆ ಮಾಡಲಾಗಿದೆ. ಜೊತೆಗೆ ಪಾಟ್ನಾ - ಪೂರ್ಣಿಯಾ ಎಕ್ಸ್‌ಪ್ರೆಸ್‌ವೇ ಮತ್ತು ಬಕ್ಸರ್-ಭಾಗಲ್ಪುರ್ ಎಕ್ಸ್‌ಪ್ರೆಸ್‌ವೇಯಂತಹ ಯೋಜನೆಗನ್ನ ಕಲ್ಪಿಸುವ ಭರವಸೆ ನೀಡಲಾಗಿದೆ.

ಹೆಚ್ಚುವರಿಯಾಗಿ ವಿದ್ಯುತ್ ಯೋಜನೆಗಳಿಗೆ 21,000 ಕೋಟಿ ಮೀಸಲಿಡಲಾಗಿದೆ. ಪಿರಪೈಂಟಿಯಲ್ಲಿ 2,400 ಮೆಗಾವ್ಯಾಟ್ ವಿದ್ಯುತ್ ಸ್ಥಾವರ ನಿರ್ಮಾಣವಾಗಲಿದೆ. ಅಲ್ಲದೇ, ಬಂಡವಾಳ ಹೂಡಿಕೆಯ ಮೂಲಕ ಹೆಚ್ಚುವರಿ ನಿಧಿಯೊಂದಿಗೆ ಬಿಹಾರವನ್ನು ಬೆಂಬಲಿಸುವ ಭರವಸೆಯನ್ನೂ ನೀಡಲಾಗಿದೆ

ನೀತಿಶ್​ ಕುಮಾರ್​ ದಿಲ್​ ಖುಷ್​​: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕೇಂದ್ರ ಬಜೆಟ್ ಬಗ್ಗೆ ತೃಪ್ತರಾಗಿದ್ದಾರೆ. "ನಾವು ವಿಶೇಷ ರಾಜ್ಯ ಅಥವಾ ವಿಶೇಷ ಹಕ್ಕುಗಳಿಗಾಗಿ ಸಹಾಯಕ್ಕಾಗಿ ಬೇಡಿಕೆ ಇಟ್ಟಿದ್ದೇವೆ. ನಾವು ಈ ಬಜೆಟ್‌ನಿಂದ ತೃಪ್ತರಾಗಿದ್ದೇವೆ ಎಂದು ಬಿಹಾರ ಮುಖ್ಯಮಂತ್ರಿ ಹೇಳಿದರು. ‘‘ರಾಜ್ಯಕ್ಕೆ ವಿಶೇಷ ಹಣ ಮಂಜೂರು ಮಾಡಿದ್ದಕ್ಕಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಪ್ರಧಾನಿ ಮೋದಿಯವರಿಗೆ ಬಿಹಾರ ಜನತೆಯ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಬಿಹಾರದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಹೇಳಿದ್ದಾರೆ.

ಅಮರಾವತಿ ಅಭಿವೃದ್ಧಿಗೆ ಬಂಪರ್​ ನೆರವು: ಇನ್ನು ಎನ್​​ಡಿಎದ ಪ್ರಮುಖ ಹಾಗೂ ಅತಿದೊಡ್ಡ ಪಾಲುದಾರ ಪಕ್ಷ ಟಿಡಿಪಿ ಆಡಳಿತ ಇರುವ ಆಂಧ್ರಪ್ರದೇಶಕ್ಕೂ ನಿರ್ಮಲಾ ಸೀತಾರಾಮನ್​ ಬಂಪರ್​ ನೆರವು ಘೋಷಿಸಿದ್ದಾರೆ. ರಾಜಧಾನಿ ಅಮರಾವತಿ ಅಭಿವೃದ್ಧಿಗೆ 15 ಸಾವಿರ ಕೋಟಿ ವಿಶೇಷ ನೆರವು ನೀಡಲಾಗುವುದು ಮತ್ತು ಅಗತ್ಯಕ್ಕೆ ಅನುಗುಣವಾಗಿ ಭವಿಷ್ಯದಲ್ಲಿ ಹೆಚ್ಚಿನ ಹೆಚ್ಚುವರಿ ಹಣವನ್ನು ನೀಡಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.

ಸಿಎಂ ಚಂದ್ರಬಾಬು ನಾಯ್ಡು ಎರಡು ಬಾರಿ ದೆಹಲಿಗೆ ತೆರಳಿ ಮಾತುಕತೆ ನಡೆಸಿದ್ದರು. ಈ ವೇಳೆ ರಾಜ್ಯದ ಹಿತಾಸಕ್ತಿ ಮುಖ್ಯ ಎಂದು ಹೇಳಿದ್ದರು. ಅವರ ಈ ಮಾತು ಇಂದಿನ ಬಜೆಟ್​ ಮೂಲಕ ಸಾಬೀತಾಗಿದೆ. ರಾಜ್ಯದ ಎರಡು ಕಣ್ಣುಗಳಂತಿರುವ ಅಮರಾವತಿ ನಿರ್ಮಾಣದ ಜತೆಗೆ ಪೋಲಾವರಂ ಯೋಜನೆಯನ್ನು ಪೂರ್ಣಗೊಳಿಸುವಂತೆ ಕೇಂದ್ರಕ್ಕೆ ಚಂದ್ರಬಾಬು ನಾಯ್ಡು ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದರು. ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌ಗೆ ಒಪ್ಪಿಗೆ. ಕೌಶಲಾಭಿವೃದ್ಧಿಯ ಫಲವಾಗಿ ಯುವಕರಿಗೆ ಕೈಗಾರಿಕಾ ಅಭಿವೃದ್ಧಿ ಜತೆಗೆ ಉದ್ಯೋಗಾವಕಾಶಗಳೂ ಸಿಗಲಿವೆ.

ಕೊಟ್ಟ ಭರವಸೆ ಈಡೇರಿಸಿದ ಕೇಂದ್ರ: ನಿರೀಕ್ಷೆಗೂ ಮೀರಿದ ಬಹುಮತದೊಂದಿಗೆ ಎನ್ ಡಿಎ ಮೈತ್ರಿಕೂಟವನ್ನು ಗೆದ್ದುಕೊಂಡ ರಾಜ್ಯಕ್ಕೆ ಕೇಂದ್ರವು ಅದೇ ಮಟ್ಟದಲ್ಲಿ ಇನಾಮು ಘೋಷಿಸಿದೆ. ಎಪಿ ವಿಭಜನಾ ಕಾಯ್ದೆಗೆ ಅನುಗುಣವಾಗಿ ರಾಜ್ಯದ ಜೀವನದಿ ಪೊಲಾವರಂ ಶೀಘ್ರ ನಿರ್ಮಾಣಕ್ಕೆ ಸಂಪೂರ್ಣ ನೆರವು ನೀಡುವುದಾಗಿ ಘೋಷಿಸಿದೆ. ಐದೂವರೆ ಕೋಟಿ ಜನರ ಆಶೋತ್ತರಗಳನ್ನು ಈಡೇರಿಸಲು ರಾಜಧಾನಿ ಅಮರಾವತಿ ಅಭಿವೃದ್ಧಿಗೆ ರೂ.15 ಸಾವಿರ ಕೋಟಿ ವಿಶೇಷ ನೆರವು ನೀಡಲಾಗುವುದು ಮತ್ತು ಅಗತ್ಯಕ್ಕೆ ಅನುಗುಣವಾಗಿ ಭವಿಷ್ಯದಲ್ಲಿ ಹೆಚ್ಚಿನ ಹೆಚ್ಚುವರಿ ಹಣವನ್ನು ನೀಡಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.

ಆಂಧ್ರಪ್ರದೇಶ ವಿಭಜನೆ ಕಾಯ್ದೆಯಂತೆ ಕೈಗಾರಿಕಾ ಅಭಿವೃದ್ಧಿಗೆ ವಿಶೇಷ ಬೆಂಬಲ ನೀಡುವುದಾಗಿ ಘೋಷಿಸಿದೆ. ವಿಶಾಖ-ಚೆನ್ನೈ ಕೈಗಾರಿಕಾ ಕಾರಿಡಾರ್‌ನಲ್ಲಿ ನೋಡ್‌ಗಳಿಗೆ ವಿಶೇಷ ನೆರವು, ಹೈದರಾಬಾದ್-ಬೆಂಗಳೂರು ಕೈಗಾರಿಕಾ ಕಾರಿಡಾರ್ ಅಭಿವೃದ್ಧಿಗೆ ವಿಶೇಷ ಹಣ, ಕೊಪ್ಪರ್ತಿ ಮತ್ತು ಓರ್ವಕಲ್ಲು ಕೈಗಾರಿಕಾ ಕೇಂದ್ರಗಳಿಗೆ ನೀರು, ವಿದ್ಯುತ್, ರಸ್ತೆ ಮತ್ತು ಹೆದ್ದಾರಿಗಳ ಅಭಿವೃದ್ಧಿಗೆ ಹಣ ನೀಡಲಾಗಿದೆ.

ಇದನ್ನೂ ಓದಿ: ಕೇಂದ್ರ ಬಜೆಟ್‌ನಲ್ಲಿ ಕೃಷಿ ವಲಯಕ್ಕೆ 1.52 ಲಕ್ಷ ಕೋಟಿ ರೂ: ನೈಸರ್ಗಿಕ ಕೃಷಿಗೆ ಉತ್ತೇಜನ - Agriculture Sector

Last Updated : Jul 23, 2024, 7:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.