ETV Bharat / bharat

14 ನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ: ಸಂಯುಕ್ತ ಕಿಸಾನ್ ಮೋರ್ಚಾದಿಂದ ಟ್ರ್ಯಾಕ್ಟರ್ ಮೆರವಣಿಗೆ

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಪಂಜಾಬ್ - ಹರಿಯಾಣ ಗಡಿಯಲ್ಲಿ ನಡೆಯುತ್ತಿರುವ 14ನೇ ದಿನಕ್ಕೆ ಕಾಲಿಟ್ಟಿದೆ. ಸಂಯುಕ್ತ ಕಿಸಾನ್ ಮೋರ್ಚಾದಿಂದ ಟ್ರ್ಯಾಕ್ಟರ್ ಮೆರವಣಿಗೆ ನಡೆಯಲಿದೆ.

ರೈತರ ಪ್ರತಿಭಟನೆ  ಸಂಯುಕ್ತ ಕಿಸಾನ್ ಮೋರ್ಚಾ  ಟ್ರ್ಯಾಕ್ಟರ್ ಮೆರವಣಿಗೆ  Tractor March  Farmers protest
14 ನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ: ಸಂಯುಕ್ತ ಕಿಸಾನ್ ಮೋರ್ಚಾದಿಂದ ಟ್ರ್ಯಾಕ್ಟರ್ ಮೆರವಣಿಗೆ
author img

By ETV Bharat Karnataka Team

Published : Feb 26, 2024, 1:33 PM IST

ಹೈದರಾಬಾದ್: ರೈತರ ಪ್ರತಿಭಟನೆಯು ಇಂದು (ಸೋಮವಾರ)14 ನೇ ದಿನಕ್ಕೆ ಕಾಲಿಟ್ಟಿದೆ. ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ರೈತರನ್ನು ಬೆಂಬಲಿಸಲು ದೇಶಾದ್ಯಂತ ಟ್ರ್ಯಾಕ್ಟರ್ ಮೆರವಣಿಗೆ ನಡೆಯಲಿದೆ. ಚಳವಳಿಯಲ್ಲಿ ತೊಡಗಿರುವ ರೈತರು ವಿಶ್ವ ವ್ಯಾಪಾರ ಸಂಸ್ಥೆಯ (ಡಬ್ಲ್ಯೂಟಿಒ) ಪ್ರತಿಕೃತಿ ದಹಿಸಲಿದ್ದಾರೆ.

ಇದಕ್ಕೂ ಮುನ್ನ ನಿನ್ನೆ (ಭಾನುವಾರ) ಫೆ.25ರಂದು ರೈತರು ಕೇಂದ್ರದ ಜೊತೆ ಮಾತುಕತೆ ನಡೆಸುವಂತೆ ಒತ್ತಾಯ ಮಾಡಿದ್ದರು. ಕಿಸಾನ್ ಮಜ್ದೂರ್ ಮೋರ್ಚಾ (ಕೆಕೆಎಂ) ಸಂಯೋಜಕ ಸರ್ವಾನ್ ಸಿಂಗ್ ಪಂಧೇರ್ ಶಂಭು ಗಡಿಯಲ್ಲಿ ಮಾತನಾಡಿ, 'ಸರ್ಕಾರ ಗಡಿ ಮತ್ತು ಇಂಟರ್ನೆಟ್ ತೆರೆಯಲು ಕೆಲಸ ಮಾಡುತ್ತಿದೆ. ಈ ಪರಿಸ್ಥಿತಿಯಲ್ಲಿ ಸರಿಯಾದ ಸಂವಾದ ನಡೆಬೇಕು'' ಎಂದು ಒತ್ತಾಯಿಸಿದ್ದಾರೆ.

ರೈತರಿಗೆ ಚಿತ್ರಹಿಂಸೆ ನೀಡುವವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ: ''ರೈತರ ಮೇಲೆ ಗುಂಡು ಹಾರಿಸುವವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು. ಪಂಜಾಬ್‌ಗೆ ನುಗ್ಗಿ ರೈತರನ್ನು ಎತ್ತಿಕಟ್ಟಿ, ಥಳಿಸಿ ಟ್ರ್ಯಾಕ್ಟರ್ ಒಡೆಯುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು'' ಎಂದು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಅಧ್ಯಕ್ಷ ಜಗಜೀತ್ ದಲ್ಲೆವಾಲ್ ಹೇಳಿದರು.

ಹರಿಯಾಣದ 7 ಜಿಲ್ಲೆಗಳಲ್ಲಿ ಇಂಟರ್ನೆಟ್ ಮೇಲಿನ ನಿಷೇಧ ತೆರವು: ಹರಿಯಾಣದ 7 ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಮೇಲಿನ ನಿಷೇಧವನ್ನು ತೆಗೆದುಹಾಕಲಾಗಿದೆ. ಫೆಬ್ರವರಿ 11 ರಂದು ಬೆಳಿಗ್ಗೆ 6 ಗಂಟೆಯಿಂದ ಅಂಬಾಲಾ, ಕುರುಕ್ಷೇತ್ರ, ಕೈತಾಲ್, ಜಿಂದ್, ಹಿಸಾರ್, ಫತೇಹಾಬಾದ್ ಮತ್ತು ಸಿರ್ಸಾದಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿತ್ತು.

ಪಂಜಾಬ್‌ನ 7 ಜಿಲ್ಲೆಗಳಲ್ಲಿ ಇಂಟರ್‌ನೆಟ್ ನಿಷೇಧ ವಿಸ್ತರಣೆ: ಪಂಜಾಬ್‌ನ 7 ಜಿಲ್ಲೆಗಳ 19 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರ ವಿಧಿಸಿದ್ದ ಇಂಟರ್‌ನೆಟ್ ನಿಷೇಧವನ್ನು ಫೆಬ್ರವರಿ 26 ರವರೆಗೆ ವಿಸ್ತರಿಸಲಾಗಿದೆ.

ಪೊಲೀಸರಿಂದ ಬ್ಯಾರಿಕೇಡ್ ತೆರವು: ದೆಹಲಿಗೆ ರೈತರು ನಡೆಸುತ್ತಿದ್ದ ಪಾದಯಾತ್ರೆ ಹಿಂಪಡೆದ ಹಿನ್ನೆಲೆಯಲ್ಲಿ ದೆಹಲಿಯ ಟಿಕ್ರಿ ಗಡಿ ಮತ್ತು ಶಂಭು ಗಡಿಯನ್ನು ತಾತ್ಕಾಲಿಕವಾಗಿ ಬ್ಯಾರಿಕೇಡ್​ ತೆರವು ಮಾಡಲಾಗಿದೆ. ಇದರಿಂದ ಹರ್ಯಾಣದಿಂದ ದೆಹಲಿಗೆ ತೆರಳುವ ಜನರಿಗೆ ನೆಮ್ಮದಿ ಸಿಕ್ಕಿದೆ. ಇದರೊಂದಿಗೆ ಫತೇಹಾಬಾದ್‌ನ ಪಂಜಾಬ್ ಗಡಿ ಉದ್ದಕ್ಕೂ ರಸ್ತೆಗಳಿಂದ ಬ್ಯಾರಿಕೇಡ್‌ಗಳನ್ನು ತೆಗೆದುಹಾಕಲಾಗಿದೆ.

ರೈತರ ಚಳವಳಿಯಲ್ಲಿ ಇದುವರೆಗೆ 7 ಜನರ ಸಾವು: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಪಂಜಾಬ್- ಹರಿಯಾಣ ಗಡಿಯಲ್ಲಿ ಪ್ರತಿಭಟಿಸುತ್ತಿರುವ ರೈತರ ಮೇಲೆ ಹರಿಯಾಣ ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದರು. ಈ ಘರ್ಷಣೆಯಲ್ಲಿ ಓರ್ವ ರೈತ ಸೇರಿದಂತೆ ಮೂವರು ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದರು. ಈ ಪೈಕಿ ಜ್ಞಾನ್ ಸಿಂಗ್ (65), ಮಂಜಿತ್ ಸಿಂಗ್ (72), ಶುಭಕರನ್ ಸಿಂಗ್ (21) ಮತ್ತು ದರ್ಶನ್ ಸಿಂಗ್ (62) ಸೇರಿದಂತೆ ನಾಲ್ವರು ಪಂಜಾಬ್ ಮೂಲದವರಾಗಿದ್ದಾರೆ. ಅಲ್ಲದೇ, ಎಸ್‌ಐ ಹೀರಾಲಾಲ್ (58), ಎಸ್‌ಐ ಕೌಶಲ್ ಕುಮಾರ್ (56) ಮತ್ತು ಎಸ್‌ಐ ವಿಜಯ್ ಕುಮಾರ್ (40) ಸಾವನ್ನಪ್ಪಿದ್ದರು.

ರೈತರ ಬೇಡಿಕೆಗಳೇನು?:

  • ಎಂಎಸ್‌ಪಿ ಗ್ಯಾರಂಟಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹ
  • ರೈತರ ಮೇಲಿನ ಮೊಕದ್ದಮೆ ಹಿಂಪಡೆಯಲು ಆಗ್ರಹ
  • ಮಾಲಿನ್ಯ ಕಾನೂನುಗಳಿಂದ ರೈತರನ್ನು ದೂರವಿಡಲು ಆಗ್ರಹ
  • ರೈತರ ಸಂಪೂರ್ಣ ಸಾಲ ಮನ್ನಾಕ್ಕೆ ಒತ್ತಾಯ
  • ರೈತರು ಮತ್ತು ಕೃಷಿ ಕಾರ್ಮಿಕರಿಗೆ ಪಿಂಚಣಿಗೆ ಆಗ್ರಹ
  • ವಿದ್ಯುತ್ ತಿದ್ದುಪಡಿ ಮಸೂದೆ 2020ರ ಹಿಂಪಡೆಯಲು ಒತ್ತಾಯ
  • ಲಖಿಂಪುರ ಖಿರಿ ಘಟನೆಯ ಅಪರಾಧಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹ

ಇದನ್ನೂ ಓದಿ: ಹಳಿ ಮೇಲೆ ಲಾರಿ ಪಲ್ಟಿ: ರೈಲಿನತ್ತ ಟಾರ್ಚ್​ ಲೈಟ್​ ತೋರಿಸಿ, ಅವಘಡ ತಪ್ಪಿಸಿದ ವೃದ್ಧ ದಂಪತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.