ETV Bharat / bharat

ದೆಹಲಿ ಶಾಲೆಯ ಒಂದೇ ಕೊಠಡಿಯಲ್ಲಿ 140 ವಿದ್ಯಾರ್ಥಿಗಳು, ಪಠ್ಯಪುಸ್ತಕ, ಸಮವಸ್ತ್ರವೂ ಇಲ್ಲ: ವಕೀಲ ಆರೋಪ - Delhi schools

ದೆಹಲಿಯಲ್ಲಿ ಸರ್ಕಾರಿ ಶಾಲೆಗಳಲ್ಲಿನ ವಾಸ್ತವ ಚಿತ್ರಣ ಬೇರೆ ಇದೆ. ಒಂದೇ ತರಗತಿಯಲ್ಲಿ ನೂರಾರು ವಿದ್ಯಾರ್ಥಿಗಳನ್ನು ತುಂಬಲಾಗಿದೆ ಮತ್ತು ನೀರಿನ ಕೊರತೆಯಂತಹ ಮೂಲ ಸೌಲಭ್ಯಗಳ ಕೊರತೆ ಇದೆ ಎಂದು ವಕೀಲರೊಬ್ಬರು ದೂರಿದ್ದಾರೆ.

ಅಶೋಕ್ ಅಗರ್ವಾಲ್
Ashok Aggarwal
author img

By ANI

Published : Apr 27, 2024, 5:17 PM IST

ನವದೆಹಲಿ: ಸರ್ಕಾರಿ ಶಾಲೆಗಳಲ್ಲಿ ಪಠ್ಯಪುಸ್ತಕ ಪೂರೈಕೆಯಾಗದಿರುವ ಕುರಿತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ)ಗೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಇದರ ಬೆನ್ನಲ್ಲೇ, ಆಮ್​ ಆದ್ಮಿ ಪಕ್ಷ ಶಾಲೆಗಳ ಬಗ್ಗೆ ಜಾಹೀರಾತಿಗಳಲ್ಲಿ ಹೇಳುತ್ತಿರುವುದಕ್ಕೂ, ವಾಸ್ತವಕ್ಕೂ ತುಂಬಾ ಭಿನ್ನವಾಗಿದೆ. ಒಂದೇ ತರಗತಿಯಲ್ಲಿ ಸುಮಾರು 140 ವಿದ್ಯಾರ್ಥಿಗಳು ತುಂಬಿದ್ದರೆ, ನೀರಿನ ಅನುಕೂಲದಂತಹ ಮೂಲ ಸೌಲಭ್ಯಗಳೂ ಇಲ್ಲ ಎಂದು ವಕೀಲ ಅಶೋಕ್ ಅಗರ್ವಾಲ್ ಎಂಬುವರು ದೂರಿದ್ದಾರೆ.

2 ಲಕ್ಷ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ಸರಬರಾಜು ಮಾಡದಿರುವ ಬಗ್ಗೆ ದೆಹಲಿ ಹೈಕೋರ್ಟ್ ಶುಕ್ರವಾರ ಸಿಎಂ ಕೇಜ್ರಿವಾಲ್ ಮತ್ತು ಎಂಸಿಡಿಗೆ ಚಾಟಿ ಬೀಸಿತ್ತು. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ನೇತೃತ್ವದ ನ್ಯಾಯಮೂರ್ತಿ ಮನ್​ಪ್ರೀತ್​ ಪ್ರೀತಮ್ ಸಿಂಗ್ ಅರೋರಾ ಅವರನ್ನೊಳಗೊಂಡ ಪೀಠವು ದೆಹಲಿ ಮುಖ್ಯಮಂತ್ರಿ ತಮ್ಮ ಬಂಧನದ ಹೊರತಾಗಿಯೂ ರಾಜೀನಾಮೆ ನೀಡದೆ ರಾಷ್ಟ್ರೀಯ ಹಿತಾಸಕ್ತಿ ಮೇಲೆ ವೈಯಕ್ತಿಕ ಹಿತಾಸಕ್ತಿ ಇಟ್ಟುಕೊಂಡಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿತ್ತು. ಅಲ್ಲದೇ, ದೆಹಲಿ ನಗರಾಭಿವೃದ್ಧಿ ಸಚಿವ ಸೌರಭ್ ಭಾರದ್ವಾಜ್ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ್ದ ನ್ಯಾಯಾಲಯವು, ವಿದ್ಯಾರ್ಥಿಗಳ ಕಷ್ಟದ ಬಗ್ಗೆ ಕಣ್ಣು ಮುಚ್ಚಿ ಕುಳಿತಿದ್ದಾರೆ. ಇದು ಅಧಿಕಾರದ ದುರಹಂಕಾರ ಎಂದು ಟೀಕಿಸಿತ್ತು.

ಇದೀಗ ವಕೀಲ ಮತ್ತು ಅರ್ಜಿದಾರ ಅಶೋಕ್ ಅಗರ್ವಾಲ್, ದೆಹಲಿ ಶಾಲೆಗಳಲ್ಲಿನ ವಾಸ್ತವವು ತುಂಬಾ ವಿಭಿನ್ನವಾಗಿದೆ. ನಾನು ದೆಹಲಿ ಸರ್ಕಾರ ಮತ್ತು ಎಂಸಿಡಿಯ ಹಲವಾರು ಶಾಲೆಗಳನ್ನು ನೋಡಿದ್ದೇನೆ. ಒಂದು ತರಗತಿಯಲ್ಲಿ 140 ವಿದ್ಯಾರ್ಥಿಗಳನ್ನು ತುಂಬಿದ್ದನ್ನು ಕಂಡಿರುವೆ. ಹೀಗೆ ಮೂರು ವಿಭಾಗಗಳು ಒಂದೇ ತರಗತಿಯಲ್ಲಿ ಒಟ್ಟಿಗೆ ಕುಳಿತಿದ್ದನ್ನು ನಾನು ಗಮನಿಸಿದ್ದು, ನೀರಿನಂತಹ ಮೂಲ ಸೌಲಭ್ಯಗಳನ್ನೂ ಒದಗಿಸಿಲ್ಲ ಎಂದು ಆರೋಪಿಸಿದ್ದಾರೆ.

ಎಂಸಿಡಿ ಅಡಿಯಲ್ಲಿ ಸುಮಾರು 8 ಲಕ್ಷ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಅವರಲ್ಲಿ ಯಾರೂ ಪಠ್ಯಪುಸ್ತಕಗಳು, ನೋಟ್‌ಬುಕ್‌ಗಳು ಮತ್ತು ಸಮವಸ್ತ್ರಗಳನ್ನು ಪಡೆದಿಲ್ಲ. ಶಿಕ್ಷಣ ಹಕ್ಕು ಕಾಯ್ದೆಯಡಿ ವಿದ್ಯಾರ್ಥಿಗಳು ಪಠ್ಯಪುಸ್ತಕಗಳು, ನೋಟ್‌ಬುಕ್‌ಗಳು, ಬರವಣಿಗೆ ಸಾಮಗ್ರಿಗಳು ಮತ್ತು ಸಮವಸ್ತ್ರಗಳನ್ನು ಪಡೆಯಲು ಅರ್ಹರಾಗಿದ್ದಾರೆ. ಅದೇ ರೀತಿ ಶಿಕ್ಷಣ ಹಕ್ಕು ಕಾಯ್ದೆಯಡಿ ಬರುವ 1ರಿಂದ 8 ನೇ ತರಗತಿಯ 10 ಲಕ್ಷ ವಿದ್ಯಾರ್ಥಿಗಳು ದೆಹಲಿ ಸರ್ಕಾರದ ಅಡಿಯಲ್ಲಿದ್ದಾರೆ. ಈಗ ಹೈಕೋರ್ಟ್ ತರಾಟೆ ನಂತರ ವಿದ್ಯಾರ್ಥಿಗಳು ನೋಟ್‌ಬುಕ್‌ಗಳನ್ನು ಸ್ವೀಕರಿಸಿದ್ದಾರೆ. ಆದರೆ, ಯಾವುದೇ ವಿದ್ಯಾರ್ಥಿಗಳಿಗೆ ಪುಸ್ತಕಗಳು ಸಿಕ್ಕಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಪಿಎಚ್‌ಡಿ ಪ್ರವೇಶ ಪರೀಕ್ಷೆಗೆ ಬದಲು ನೆಟ್ ಸ್ಕೋರ್ ನಿಯಮ ನಿಲ್ಲಿಸಿ: ಜೆಎನ್‌ಯು ವಿದ್ಯಾರ್ಥಿಗಳ ಒಕ್ಕೂಟದ ಆಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.