ETV Bharat / bharat

ಸರ್ಕಾರಿ ಆಸ್ಪತ್ರೆಯಲ್ಲಿ 10 ವರ್ಷದ ಕ್ಯಾನ್ಸರ್​ ರೋಗಿಗೆ ಕಚ್ಚಿದ ಇಲಿ; ಬಾಲಕ ಸಾವು, ತನಿಖಾ ವರದಿಯೂ ಬಹಿರಂಗ! - CANCER PATIENT BITTEN BY RAT

ಇಲಿ ಕಡಿತ ಪ್ರಕರಣ ಸಂಬಂಧ ತನಿಖೆಗೆ ಸರ್ಕಾರ ತಂಡ ರಚಿಸಿದ್ದು, ಈ ತಂಡ ಬಾಲಕನ ಸಾವಿನ ಕುರಿತ ವರದಿ ಮಂಡಿಸಿದೆ.

10-year-old-cancer-patient-bitten-by-rat-at-govt-hospital-in-jaipur-dies
ಸಾಂದರ್ಭಿಕ ಚಿತ್ರ (ಈಟಿವಿ ಭಾರತ್​​)
author img

By PTI

Published : Dec 14, 2024, 1:05 PM IST

ಜೈಪುರ, ರಾಜಸ್ಥಾನ: ಕ್ಯಾನ್ಸರ್​ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ 10 ವರ್ಷದ ಬಾಲಕನ ಕಾಲ್ಬೆರಳಿಗೆ ಇಲಿ ಕಡಿತದ ಪರಿಣಾಮ ಸಾವನ್ನಪ್ಪಿರುವ ದಾರುಣ ಘಟನೆ ಜೈಪುರದಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯ ಕ್ಯಾನ್ಸರ್​ ಸಂಸ್ಥೆಯಲ್ಲಿ ಬಾಲಕ ಚಿಕಿತ್ಸೆಗೆಂದು ಡಿಸೆಂಬರ್​ 11ರಂದು ದಾಖಲಾಗಿದ್ದ. ಬಾಲಕನಿಗೆ ಇಲಿ ಕಚ್ಚಿದೆ ಆದರೆ, ಬಾಲಕನ ಸಾವಿಗೆ ಸೆಪ್ಟಿಸೆಮಿಯಾ ಶಾಕ್​ ಮತ್ತು ಹೈ ಇನ್​​ಫೆಕ್ಷನ್​ ಕಾರಣ ಎಂದು ಸರ್ಕಾರದ ಸಮಿತಿ ತಿಳಿಸಿದೆ. ಇಲಿ ಕಡಿತ ಪ್ರಕರಣ ಸಂಬಂಧ ತನಿಖೆಗೆ ಸರ್ಕಾರ ತಂಡ ರಚಿಸಿದ್ದು, ಈ ತಂಡ ಬಾಲಕನ ಸಾವಿಗೆ ಇಲಿ ಕಡಿತ ಕಾರಣವಲ್ಲ ಎಂದಿದೆ.

ಈ ಘಟನೆ ಕುರಿತು ಮಾತನಾಡಿರುವ ಆಸ್ಪತ್ರೆಯ ಸೂಪರಿಟೆಂಡೆಂಟ್​ ಡಾ ಸಂದೀಪ್​ ಜಸುಜಾ, ಮಗು ಜ್ವರ ಮತ್ತು ನ್ಯೂಮೋನಿಯಾದಿಂದ ಬಳಲುತ್ತಿದ್ದು, ಇದರ ಪರಿಣಾಮ ಹೆಚ್ಚಿನ ಸೋಂಕು ಮತ್ತು ಸೆಪ್ಟಿಸೆಮಿಯಾ ಆಘಾತ ಉಂಟಾಗಿದೆ ಎಂದಿದ್ದಾರೆ.

ಈ ಪ್ರಕರಣ ಸಂಬಂಧ ವೈದ್ಯಕೀಯ ಶಿಕ್ಷಣ ಕಾರ್ಯದರ್ಶಿ ಅಂಬರೀಶ್​ ಕುಮಾರ್, ರಾಜ್ಯ ಕ್ಯಾನ್ಸರ್ ಸಂಸ್ಥೆಗೆ ಸಂಬಂಧಿಸಿದ ಸವಾಯಿ ಮಾನ್ ಸಿಂಗ್ (ಎಸ್‌ಎಂಎಸ್) ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಿಂದ ವರದಿ ಕೇಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ,

ಈ ಪ್ರಕರಣ ಸಂಬಂಧ ವರದಿ ಮಾಡಿದ ಸ್ಥಳೀಯ ಪತ್ರಿಕೆಗಳು, ಆಸ್ಪತ್ರೆಗೆ ದಾಖಲಾದ ಸ್ವಲ್ಪ ಸಮಯದ ಬಳಿಕ ಮಗು ಅಳಲು ಆರಂಭಿಸಿತು. ಕುಟುಂಬ ಸದಸ್ಯರು ಆತನಿಗೆ ಹೊದಿಸಿದ್ದ ಹೊದಿಕೆಯನ್ನು ತೆಗೆದಾಗ, ಇಲಿ ಕಡಿತದಿಂದ ಆತನ ಕಾಲ್ಬೆರಳುಗಳಿಂದ ರಕ್ತ ಸೋರುವುದನ್ನು ಗಮಿಸಿದರು. ತಕ್ಷಣಕ್ಕೆ ಅಲ್ಲಿದ್ದ ನರ್ಸ್​​ಗಳಿಗೆ ತಿಳಿಸಿ, ಪ್ರಾಥಮಿಕ ವೈದ್ಯಕೀಯ ಚಿಕಿತ್ಸೆ ನಡೆಸಲಾಯಿತು ಎಂದು ತಿಳಿಸಿದ್ದವು.

ಇಲಿ ಕಚ್ಚಿದ ಮಾಹಿತಿ ಬಂದ ಕೂಡಲೇ ಮಗುವಿಗೆ ಚಿಕಿತ್ಸೆ ನೀಡಿದ್ದೇವೆ. ಆಸ್ಪತ್ರೆ ಆವರಣದಲ್ಲಿ ಶುಚಿತ್ವ ಕಾಪಾಡಲು ನಿರ್ದೇಶನ ನೀಡಲಾಗಿದೆ ಎಂದು ಜಸುಜಾ ತಿಳಿಸಿದ್ದಾರೆ.

ಇದನ್ನೂ ಓದಿ: ಎಸಿ ಕೋಣೆಯಲ್ಲಿ ಇಲಿ ಪಾಷಾಣ: ಇಬ್ಬರು ಮಕ್ಕಳು ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.