ಸ್ನಾನಗೃಹದ ನೀರು ಹರಿವಿನ ವಿಚಾರಕ್ಕೆ ಮಹಿಳೆಯ ಮೇಲೆ ಹಲ್ಲೆ: ವಿಡಿಯೋ ವೈರಲ್ - ವೈರಲ್ ವಿಡಿಯೋ
🎬 Watch Now: Feature Video
ಹುಬ್ಬಳ್ಳಿ: ಸ್ನಾನಗೃಹದ ನೀರು ಹರಿವಿನ ವಿಚಾರಕ್ಕೆ ಒಂಟಿ ಮಹಿಳೆಯ ಮೇಲೆ ಸ್ಥಳೀಯ ನಿವಾಸಿಗಳಾದ ಕುಟುಂಬಸ್ಥರು ಮನಸೋಇಚ್ಛೆ ಹಲ್ಲೆ ನಡೆಸಿದ ಘಟನೆ ಕುಂದಗೋಳ ತಾಲೂಕಿನ ಸಂಕ್ಲಿಪುರ ಗ್ರಾಮದಲ್ಲಿ ನಡೆದಿದೆ. ಹಲ್ಲೆಗೊಳಗಾದ ಸಂಕ್ಲಿಪುರ ಗ್ರಾಮದ ಲಲಿತಾ ತಿಪ್ಪಣ್ಣ ಕರೆಮ್ಮನವರ ಎಂಬ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ನಾನ ಗೃಹದ ನೀರನ್ನು ಹರಿಬಿಡುವ ವಿಚಾರವಾಗಿ ಮಾತಿಗೆ ಮಾತು ಬೆಳೆದು ಏಕಾಏಕಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಗುಡಗೇರಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated : Feb 3, 2023, 8:18 PM IST