ಯುವಕರ ಧೈರ್ಯಕ್ಕೊಂದು ಸಲಾಂ! ಗಂಗಾನದಿಯಲ್ಲಿ ತೇಲಿ ಹೋಗ್ತಿದ್ದ ಮಹಿಳೆಯ ರಕ್ಷಣೆ
🎬 Watch Now: Feature Video
ಹರಿದ್ವಾರ(ಉತ್ತರಾಖಂಡ): ಗಂಗಾನದಿಯಲ್ಲಿ ಕೊಚ್ಚಿ ಹೋಗ್ತಿದ್ದ ಮಹಿಳೆಯೋರ್ವರನ್ನು ಯುವಕರು ಪ್ರಾಣದ ಹಂಗು ತೊರೆದು, ರಕ್ಷಿಸಿದ್ದಾರೆ. ಸದ್ಯ ಆಕೆಯ ಸ್ಥಿತಿ ಚಿಂತಾಜನಕವಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಹಿಳೆ ಗಂಗಾನದಿಗೆ ಹಾರಿದ್ದಾಳೋ? ಅಥವಾ ಸ್ನಾನ ಮಾಡುವಾಗ ಕೊಚ್ಚಿಕೊಂಡು ಹೋಗಿದ್ದಳೋ ಎಂಬುದು ಸ್ಪಷ್ಟವಾಗಿಲ್ಲ. ಕಂಖಾಲ್ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿರುವ ಪ್ರಕಾರ, ಮಹಿಳೆಯನ್ನು ಉಷಾ ಎಂದು ಗುರುತಿಸಲಾಗಿದೆ.