ಮಹಿಳೆ ಮೇಲೆ ಹರಿದ ಬಸ್ನ ಎರಡು ಟೈರ್... ಸಿಸಿಟಿವಿಯಲ್ಲಿ ದೃಶ್ಯ ಸೆರೆ - bus hit women in Surat
🎬 Watch Now: Feature Video

ಸೂರತ್(ಗುಜರಾತ್): ಗೃಹೋಪಯೋಗಿ ಸಾಮಗ್ರಿ ಖರೀದಿ ಮಾಡಲು ತೆರಳುತ್ತಿದ್ದ ಮಹಿಳೆಯೊಬ್ಬರಿಗೆ ಬಸ್ವೊಂದು ಗುದ್ದಿದ್ದು, ರಸ್ತೆ ಮೇಲೆ ಬಿದ್ದ ಅವರ ಮೇಲೆ ಬಸ್ನ ಎರಡು ಟೈರ್ ಹರಿದು ಹೋಗಿವೆ. ಭೀಕರ ಘಟನೆಯ ದೃಶ್ಯಾವಳಿ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸೂರತ್ನ ಮೋಟಾ ವರಾಚಾ ವೈಟ್ ಹೌಸ್ ರೆಸಿಡೆನ್ಸಿ ಪಾರ್ಕಿಂಗ್ ಸ್ಥಳದಲ್ಲಿ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ನಿತಾಬೆನ್ ಎಂಬ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.