ಕ್ರಿಕೆಟ್ ಬ್ಯಾಟ್ನಿಂದ ಗಂಡನಿಗೆ ಹಿಗ್ಗಾಮುಗ್ಗಾ ಥಳಿಸಿದ ಪತ್ನಿ.. ಆಸ್ಪತ್ರೆಗೆ ದಾಖಲಾದ ಪತಿ - ರಾಜಸ್ಥಾನದ ಬಿಕಾನೇರ್
🎬 Watch Now: Feature Video
ಬಿಕಾನೇರ್(ರಾಜಸ್ಥಾನ): ಕ್ರಿಕೆಟ್ ಬ್ಯಾಟ್ನಿಂದ ಗಂಡನ ಮೇಲೆ ಹೆಂಡತಿ ಹಲ್ಲೆ ನಡೆಸಿರುವ ಘಟನೆ ರಾಜಸ್ಥಾನದ ಬಿಕಾನೇರ್ನಲ್ಲಿ ನಡೆದಿದ್ದು, ಅದರ ವಿಡಿಯೋ ವೈರಲ್ ಆಗಿದೆ. ಮನೆಯೊಳಗೆ ಮಲಗಿದ್ದ ಗಂಡನ ಮೇಲೆ ಹೆಂಡತಿ ಕ್ರಿಕೆಟ್ ಬ್ಯಾಟ್ನಿಂದ ಹತ್ತಾರು ಸಲ ಥಳಿಸಿದ್ದಾರೆ. ಗಾಯಗೊಂಡಿರುವ ಗಂಡ ಚಿಕಿತ್ಸೆಗೋಸ್ಕರ ಆಸ್ಪತ್ರೆಗೆ ದಾಖಲಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ. ಕೌಟುಂಬಿಕ ಕಲಹದಿಂದ ಈ ಘಟನೆ ನಡೆದಿದೆ ಎನ್ನಲಾಗ್ತಿದೆ.