ಭಕ್ತರ ಕಿರಿಕಿರಿ ತಪ್ಪಿಸಿಕೊಳ್ಳಲು ಆ ಪ್ರಖ್ಯಾತ ಗುರೂಜಿ ಮಾಡಿದ್ದಾದರೂ ಏನು? - kannadanews
🎬 Watch Now: Feature Video
ಇವರು ಮಾಜಿ ಪ್ರಧಾನಿಯಿಂದಲೇ ಪಾದಪೂಜೆ ಮಾಡಿಸಿಕೊಂಡ ಅವಧೂತ. ಇವರ ಆಶೀರ್ವಾದ ಸಿಕ್ಕರೆ ಸಾಕು ಅಂತ ಸಾಮಾನ್ಯ ಜನರಷ್ಟೇ ಅಲ್ಲ, ಗಣ್ಯರು ಕೂಡ ಆಶ್ರಮದಲ್ಲಿ ಅವರಿಗೋಸ್ಕರ ಕಾಯುತಿದ್ರು. ಆದ್ರೆ ಇನ್ಮುಂದೆ ಆ ಗುರೂಜಿಯ ದರ್ಶನ ಭಾಗ್ಯ ಅವರ ಭಕ್ತ ಸಮೂಹಕ್ಕೆ ಇಲ್ಲದಂತಾಗುವ ಲಕ್ಷಣಗಳು ಗೋಚರಿಸುತ್ತಿವೆ. ಅವರು ಬೇರೆ ಯಾರೂ ಅಲ್ಲ, ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ವಿನಯ್ ಗುರೂಜಿ. ಭಕ್ತರ ದಟ್ಟಣೆ ಹೆಚ್ಚಾಗಿದ್ದರಿಂದ ಗುರೂಜಿ ಇದೀಗ ಎಲ್ಲರಿಂದ ಬೇರೆಯಾಗಿ ಏಕಾಗ್ರತೆಗಾಗಿ ಧ್ಯಾನದ ಮೊರೆ ಹೋಗ್ತಿದ್ದಾರೆ.