ಪೊಲೀಸರ ಬೈಕ್ನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಕೊಲೆ ಆರೋಪಿ, ವಿಡಿಯೋ - arrest
🎬 Watch Now: Feature Video
ಶಿವಮೊಗ್ಗ: ಕೊಲೆ ಪ್ರಕರಣವೊಂದರ ಪ್ರಮುಖ ಆರೋಪಿ ರೂಮಾನ್ ಎಂಬಾತ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ವಿಡಿಯೋ ವೈರಲ್ ಆಗಿದೆ. ಮಾರ್ಚ್ 20ರಂದು ಜಿಕ್ರು ಎಂಬಾತನ ಕೊಲೆ ನಡೆದಿತ್ತು. ಈ ಕೊಲೆಯ ಪ್ರಮುಖ ಆರೋಪಿ ರೂಮಾನ್‌ನನ್ನು ದೊಡ್ಡಪೇಟೆ ಪೊಲೀಸ್ ಠಾಣೆಯ ಕ್ರೈಂ ವಿಭಾಗದ ಕಾನ್ಸ್ಟೇಬಲ್ಗಳಾದ ರಮೇಶ್ ಹಾಗೂ ನಿತಿನ್ ಬೈಕ್ನಲ್ಲಿ ಮಧ್ಯ ಕೂರಿಸಿಕೊಂಡು ಬರುವಾಗ ಮುರಾದನಗರದಲ್ಲಿ ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಮೇ 4ರಂದು ಬೆಳಗ್ಗೆ 9:30 ರ ಸುಮಾರಿಗೆ ನಡೆದ ಘಟನೆಯ ವಿಡಿಯೋ ವೈರಲ್ ಆಗಿದೆ. ಬಳಿಕ ಆತನನ್ನು ಪೊಲೀಸ್ ಜೀಪ್ ಕೆರೆಸಿಕೊಂಡು ಠಾಣೆಗೆ ಕರೆದೊಯ್ಯಲಾಗಿದೆ.