ಅಸ್ವಸ್ಥಗೊಂಡ ಲಂಗೂರಗೆ ಒಆರ್‌ಎಸ್ ನೀಡಿ ಮಾನವೀಯತೆ ಮೆರೆದ ಪೊಲೀಸರು: ವಿಡಿಯೋ - ಹರಿದ್ವಾರ
🎬 Watch Now: Feature Video
ಹರಿದ್ವಾರ(ಉತ್ತರಾಖಂಡ): ಪೊಲೀಸರ ಕಠಿಣ ಮತ್ತು ಹಿಂಸಾತ್ಮಕ ವರ್ತನೆಯ ಬಗ್ಗೆ ಆಗಾಗ್ಗೆ ವರದಿಯಾಗುತ್ತವೆ. ಆದರೆ, ವಿಡಿಯೋದಲ್ಲಿ ಪೊಲೀಸರ ಮಾನವೀಯತೆ ಅನಾವರಣಗೊಂಡಿದೆ. ಹರಿದ್ವಾರದ ದೇವಸ್ಥಾನವೊಂದರ ವಾಕಿಂಗ್ ಪಾತ್ ಬಳಿ ಅಸ್ವಸ್ಥಗೊಂಡ ಲಂಗೂರಕ್ಕೆ ಕೆಲವು ಪೊಲೀಸರು ಬಾಟಲಿಯಿಂದ ಒಆರ್‌ಎಸ್ ದ್ರಾವಣ ಕುಡಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪೊಲೀಸರ ಈ ದಯೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.