ಕಸದ ಜೊತೆ ಡಂಪಿಂಗ್ ಯಾರ್ಡ್‍ಗೆ ಬಿದ್ದ ಗಾರ್ಬೇಜ್ ಆಟೋ - ಈಟಿವಿ ಭಾರತ್ ಕನ್ನಡ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16005214-thumbnail-3x2-bng.jpeg)
ಚಿಕ್ಕಮಗಳೂರು : ಕಸವನ್ನು ಡಂಪಿಂಗ್ ಯಾರ್ಡ್‍ನಲ್ಲಿ ಸುರಿಯುತ್ತಿದ್ದ ವೇಳೆ ಕಸದ ಸಮೇತ ಆಟೋ ಕಸದ ರಾಶಿಗೆ ಬಿದ್ದಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಸಂಭವಿಸಿದೆ. ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮ ಪಂಚಾಯಿತಿ ಮತ್ತಿಗಟ್ಟೆ ಮಾರ್ಗದಲ್ಲಿ ಡಂಪಿಂಗ್ ಯಾರ್ಡ್ ನಿರ್ಮಿಸಿದ್ದು, ಸರಿಯಾದ ಮಾರ್ಗ ಇರದ ಕಾರಣ ಕೆಸರಿನಲ್ಲಿ ಜಾರಿ ಆಟೋ ಗುಂಡಿಗೆ ಬಿದ್ದಿದೆ. ಆಟೋ ಚಾಲಕನಿಗೆ ಸಣ್ಣ ಪುಟ್ಟಗಾಯಗಳಾಗಿದೆ. ಅಲ್ಲೇ ಹತ್ತಿರದಲ್ಲಿ ಸಾವನ್ನಪ್ಪಿದ ಹಸುವನ್ನು ಹೂಳಲು ಬಂದಿದ್ದ ಜೆಸಿಬಿ ಸಹಾಯದಿಂದ ಆಟೋವನ್ನು ಗುಂಡಿಯಿಂದ ಮೇಲೆತ್ತಲಾಗಿದೆ.