ಕೊಪ್ಪಳದಲ್ಲಿ ನಿಯಂತ್ರಣ ತಪ್ಪಿ ಬಾವಿಗೆ ಬಿದ್ದ ಕಾರು: ಚಾಲಕ ಸಾವು, ಮೂವರು ಪಾರು - Koppal car accident
🎬 Watch Now: Feature Video
ಕೊಪ್ಪಳ: ನಿಯಂತ್ರಣ ತಪ್ಪಿ ಕಾರೊಂದು ಬಾವಿಗೆ ಬಿದ್ದು ಚಾಲಕ ಸಾವನ್ನಪ್ಪಿರುವ ಘಟನೆ ಕೊಪ್ಪಳ-ಅಳವಂಡಿ ರಸ್ತೆಯ ಮೈನಳ್ಳಿ ಬಳಿ ನಡೆದಿದೆ. ಸಂಗಮೇಶ ಹಿರೇಮಠ (26) ಮೃತ ವ್ಯಕ್ತಿ. ಕಾರಿನಲ್ಲಿದ್ದ ನಾಲ್ವರು ಹರಿಹರದಿಂದ ಕೊಪ್ಪಳಕ್ಕೆ ಮದುವೆಗೆ ಬರುತ್ತಿದ್ದಾಗ ದುರಂತ ಸಂಭವಿಸಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗು ಅಳವಂಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಾವಿಯಿಂದ ಶವ ಮತ್ತು ಕಾರನ್ನು ಮೇಲಕ್ಕೆತ್ತಿದ್ದಾರೆ.