ಉಪ ರಾಷ್ಟ್ರಪತಿ ಬೀಳ್ಕೊಡುಗೆ; ರಾಜ್ಯಸಭೆಯಲ್ಲಿ ಕನ್ನಡದಲ್ಲೇ ಗುಣಗಾನ ಮಾಡಿದ ಪ್ರಹ್ಲಾದ್ ಜೋಶಿ - ಈಟಿವಿ ಭಾರತ ಕನ್ನಡ

🎬 Watch Now: Feature Video

thumbnail

By

Published : Aug 8, 2022, 5:53 PM IST

ನವದೆಹಲಿ: ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರಿಗೆ ರಾಜ್ಯಸಭೆಯಲ್ಲಿಂದು ಬೀಳ್ಕೊಡುಗೆ ನೀಡಲಾಯಿತು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಹ್ಹಾದ್ ಜೋಶಿ ಕನ್ನಡದಲ್ಲೇ ಮಾತನಾಡಿ ಗಮನ ಸೆಳೆದರು. ಕರ್ನಾಟಕದ ಜೊತೆಗಿನ ನಾಯ್ಡು ಅವರ ಸಂಬಂಧ ಹಾಗು ಸಭಾಪತಿಯಾಗಿ ಸಲ್ಲಿಸಿದ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದರ ಜೊತೆಗೆ, "ನೀವು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ, ಮಂತ್ರಿಯಾಗಿದ್ದಾಗೆಲ್ಲಾ ಬೆಂಗಳೂರಿಗೆ ಬಂದಿದ್ದೀರಿ. ಈ ಸಂದರ್ಭದಲ್ಲಿ ಬೆಂಗಳೂರಿನ ಚಿಕ್ಕದಾದ ಜನಾರ್ಧನ ಹೋಟೆಲ್​ನಲ್ಲಿ ಉಪಹಾರ ಸೇವಿಸಿದ್ದು ನನಗೆ ನೆನಪಿದೆ. ಎಲ್ಲರೊಂದಿಗೂ ಪ್ರೀತಿಯಿಂದ ಬೆರೆಯುವ ನಿಮ್ಮ ಗುಣ ದೊಡ್ಡದು" ಎಂದು ಗುಣಗಾನ ಮಾಡಿದರು. ಸಚಿವ ಜೋಶಿ ಭಾಷಣ ವೀಕ್ಷಿಸಿ..

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.