ಕಾರ್ಗಿಲ್ ಸ್ಮರಣೆ: ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ 3 ಸೇನಾಪಡೆಗಳ ಮುಖ್ಯಸ್ಥರಿಂದ ಗೌರವ - ಈಟಿವಿ ಭಾರತ ಕನ್ನಡ ನ್ಯೂಸ್
🎬 Watch Now: Feature Video
ಇಂದು ಕಾರ್ಗಿಲ್ ವಿಜಯೋತ್ಸವ ದಿನ. 1999 ರಲ್ಲಿ ನಡೆದ ಯುದ್ಧದಲ್ಲಿ ಪಾಕಿಸ್ತಾನವನ್ನು ಸದೆಬಡಿದು ಭಾರತ ಜುಲೈ 26 ರಂದು ವಿಜಯ ಪತಾಕೆ ಹಾರಿಸಿತ್ತು. ಇದರಲ್ಲಿ ಹಲವಾರು ಯೋಧರು ಹುತಾತ್ಮರಾಗಿದ್ದರು. ಅವರ ನೆನಪಿಗಾಗಿ ನಿರ್ಮಿಸಲಾಗಿರುವ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಮೂರು ಪಡೆಗಳ ಸೇನಾ ಮುಖ್ಯಸ್ಥರಾದ ಜನರಲ್ ಮನೋಜ್ ಪಾಂಡೆ, ಅಡ್ಮಿರಲ್ ಆರ್. ಹರಿಕುಮಾರ್ ಮತ್ತು ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಪುಷ್ಪ ನಮನ ಸಲ್ಲಿಸಿದರು.