ವಲಸೆ ಕಾರ್ಮಿಕರಿಗೆ 600ಕ್ಕೂ ಹೆಚ್ಚು ರೇಷನ್ ಕಿಟ್ ವಿತರಿಸಿದ ಟೆಕ್ಕಿಗಳ ತಂಡ! - ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ
🎬 Watch Now: Feature Video
ಬೆಂಗಳೂರು: ಲಾಕ್ಡೌನ್ ಪರಿಣಾಮ ಹಸಿವಿನಿಂದ ಬಳಲುತ್ತಿರುವ ವಲಸೆ ಕಾರ್ಮಿಕರಿಗೆ, 600ಕ್ಕೂ ಹೆಚ್ಚು ರೇಷನ್ ಕಿಟ್ನ್ನು ಟೆಕ್ಕಿಗಳ ತಂಡವೊಂದು ವಿತರಿಸಿದೆ. ಇದಕ್ಕಾಗಿ ದೇಣಿಗೆ ಸಂಗ್ರಹ ಮಾಡಲು ಈ ತಂಡವು, ಫೇಸ್ಬುಕ್ನಲ್ಲಿ 100 ಹೆಸರಿನಲ್ಲಿ ಅಕೌಂಟ್ ಸೃಷ್ಟಿಸಿ ಹಣ ಸಂಗ್ರಹಿಸಿದೆ. ಖಾಸಗಿ ಕಂಪನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ದೇಬಿಯಾನ್ ಮುಖರ್ಜಿ, ಬಡವರಿಗೆ ಸಹಾಯ ಮಾಡಬೇಕೆಂದು ಫೇಸ್ಬುಕ್ನಲ್ಲಿ 100 ಹೆಸರಿನಲ್ಲಿ ಗ್ರೂಪ್ ರಚಿಸಿದ್ದಾರೆ. ತಮಗೆ ಫ್ರೆಂಡ್ ಆಗಿದ್ದ ಸುಮಾರು 900ಕ್ಕೂ ಹೆಚ್ಚು ಸ್ನೇಹಿತರಿಗೆ ತಮ್ಮ ಉದ್ದೇಶ ತಿಳಿಸಿ ತಲಾ ಒಬ್ಬರಿಂದ 100 ರೂ. ನೀಡುವಂತೆ ಮನವಿ ಮಾಡಿದ್ದರು. ಇವರ ಮನವಿಗೆ ಸ್ಪಂದಿಸಿದ ಸದಸ್ಯರಿಂದ ₹2.50 ಲಕ್ಷ ದೇಣಿಗೆ ಸಂಗ್ರಹಿಸಿ, ಕೂಡ್ಲು ಗ್ರಾಮದ ರಾಮರೆಡ್ಡಿ ಕಾಲೋನಿಯ ನೂರಾರು ವಲಸೆ ಕಾರ್ಮಿಕರಿಗೆ ರೇಷನ್ ಕಿಟ್ ವಿತರಿಸಿದ್ದಾರೆ. ಹಸಿದವರ ಹೊಟ್ಟೆ ತುಂಬಿಸಿರುವ ಈ ತಂಡದ ಸದಸ್ಯರು ಈಟಿವಿ ಭಾರತನೊಂದಿಗೆ ತಮ್ಮ ಕಾರ್ಯದ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.