ಕಾಂಪೌಂಡ್ ಗೋಡೆಗೆ ಡಿಕ್ಕಿ ಹೊಡೆದು ವೇಗವಾಗಿ ಬಂದ ಬೈಕ್: ವಿಡಿಯೋ - two-wheeler ramming the compound wall of a public toilet on Sathyamangalam - Annur Road
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-15114449-thumbnail-3x2-bin.jpg)
ಅಣ್ಣೂರು (ತಮಿಳುನಾಡು): ಅಣ್ಣೂರು ಬಳಿ ಕಾಂಪೌಂಡ್ ಗೋಡೆಗೆ ವೇಗವಾಗಿ ಬಂದ ಬೈಕ್ವೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಕಡಲೂರು ಜಿಲ್ಲೆಯ ಕುರಿಂಜಿಪಾಡಿ ಮೂಲದ ಎಂ.ಕೃಷ್ಣಸಾಮಿ (21) ಮತ್ತು ಅಣ್ಣೂರಿನ ಶ್ರೀತ್ (25) ಎಂದು ಗುರುತಿಸಲಾಗಿದೆ. ದ್ವಿಚಕ್ರ ವಾಹನ ಸವಾರನಾಗಿದ್ದ ಲುರ್ತು ಸಹಾಯರಾಜ್ (25) ಎಂಬುವರು ಗಂಭೀರವಾಗಿ ಗಾಯಗೊಂಡು, ಕೊಯಮತ್ತೂರು ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೈಕ್ ವೇಗವಾಗಿ ಬಂದು ಗೋಡೆಗೆ ಡಿಕ್ಕಿ ಹೊಡೆಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಪಘಾತದ ವಿಡಿಯೋದಲ್ಲಿ ಸತ್ಯಮಂಗಲಂ - ಅಣ್ಣೂರು ರಸ್ತೆಯಲ್ಲಿರುವ ಸಾರ್ವಜನಿಕ ಶೌಚಾಲಯದ ಕಾಂಪೌಂಡ್ ಗೋಡೆಗೆ ದ್ವಿಚಕ್ರ ವಾಹನವು ಡಿಕ್ಕಿ ಹೊಡೆದಿದೆ.