ಕಾರನ್ನು 2 ಕಿಮೀ ದೂರ ಎಳೆದೊಯ್ದ ಕಂಟೈನರ್: ಭಯಾನಕ ವಿಡಿಯೋ - ಪುಣೆ ಹೆದ್ದಾರಿಯಲ್ಲಿ ಕಾರು ಕಂಟೈನರ್ ಡಿಕ್ಕಿ
🎬 Watch Now: Feature Video
ಪುಣೆ: ಹಾದಿ ಬಿಡದ ಕಾರಣಕ್ಕೋ ಏನೋ ಕಂಟೈನರ್ ಚಾಲಕ, ಕಾರನ್ನು 2 ಕಿಮೀ ದೂರಕ್ಕೆ ಎಳೆದೊಯ್ದ ಭೀಕರ ವಿಡಿಯೋ ಮಹಾರಾಷ್ಟ್ರದಲ್ಲಿ ಬೆಳಕಿಗೆ ಬಂದಿದೆ. ಅಹ್ಮದ್‌ನಗರ- ಪುಣೆ ಹೆದ್ದಾರಿಯಲ್ಲಿ ಈ ಭಯಾನಕ ಅಪಘಾತ ನಡೆದಿದೆ. ವೇಗವಾಗಿ ಚಲಿಸುತ್ತಿದ್ದ ಕಂಟೈನರ್ಗೆ ಮುಂಬದಿಯಲ್ಲಿ ಡಿಕ್ಕಿಯಾಗಿ ಸಿಕ್ಕಿಕೊಂಡಿದ್ದ ಕಾರನ್ನು ಚಾಲಕ ಹಾಗೆಯೇ ತಳ್ಳಿಕೊಂಡು ಹೋಗಿದ್ದಾನೆ. ಹೀಗೆ 2 ಕಿಲೋ ಮೀಟರ್ ದೂರಕ್ಕೆ ಕಾರನ್ನು ಎಳೆದೊಯ್ದಿದ್ದಾನೆ. ಕಾರಿನ ಭಾಗ ರಸ್ತೆಗೆ ಪರಚಿದ ಕಾರಣ ಬೆಂಕಿಯ ಕಿಡಿಗಳು ಎದ್ದಿವೆ. ಈ ಭಯಾನಕ ದೃಶ್ಯ ರಸ್ತೆ ಪಕ್ಕದ ಹೋಟೆಲ್ವೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಚ್ಚರಿ ಅಂದ್ರೆ ಈ ವೇಳೆ ಯಾರಿಗೂ ಪ್ರಾಣಾಪಾಯವಾಗಿಲ್ಲ.