ಸಮುದ್ರದ ನಡುವೆ ಬೋಟ್ ಮುಳುಗಡೆ : ಜೀವಾಪಾಯದಿಂದ ಮೀನುಗಾರರು ಪಾರು - ಈಟಿವಿ ಭಾರತ ಕನ್ನಡ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16489936-thumbnail-3x2-bng.jpeg)
ಕನ್ಯಾಕುಮಾರಿ(ತಮಿಳುನಾಡು): ಮೀನುಗಾರಿಕೆಗೆಂದು ಮುತ್ತಂ ಮೀನುಗಾರಿಕಾ ಬಂದರಿನಿಂದ ಸಮುದ್ರಕ್ಕೆ ತೆರಳಿದ್ದ ಬೋಟ್ ಸಮುದ್ರದಲ್ಲಿ ಮುಳುಗುತ್ತಿರುವ ವಿಡಿಯೋ ಬಿಡುಗಡೆಯಾಗಿದೆ. 22ರಂದು ಮುಟ್ಟಂ ಗ್ರಾಮದ 19 ಮಂದಿ ಮೀನುಗಾರರು ಮೀನುಗಾರಿಕೆಗೆ ಸಮುದ್ರಕ್ಕೆ ಇಳಿದಿದ್ದಾರೆ. 24ರಂದು ಶನಿವಾರ ಮುಂಜಾನೆ ಸಮುದ್ರದ ಮಧ್ಯದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಅನಿರೀಕ್ಷಿತ ಅಲೆ ಎದ್ದಿದ್ದು, ದೋಣಿ ಮುಳುಗಲು ಆರಂಭಿಸಿದೆ. ದೋಣಿಯಲ್ಲಿದ್ದ 19 ಮಂದಿ ಮೀನುಗಾರರು ಸರಿಯಾದ ಸಮಯಕ್ಕೆ ಸಮುದ್ರಕ್ಕೆ ಧುಮುಕಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮುಳುಗಡೆಯಾಗುತ್ತಿದ್ದ ಬೋಟ್ 19 ಮಂದಿಯನ್ನು ನಾಡದೋಣಿ ಮೀನುಗಾರರು ಸುರಕ್ಷಿತವಾಗಿ ರಕ್ಷಿಸಿ ಮುತ್ತಂ ಮೀನುಗಾರಿಕಾ ಬಂದರಿಗೆ ಕಳುಹಿಸಿದ್ದಾರೆ. ಈ ಬಗ್ಗೆ ಕುಳಚಲ್ ಕರಾವಳಿ ಪೊಲೀಸರು ತನಿಖೆ ನಡೆಸುತ್ತಿರುವಾಗಲೇ ದೋಣಿ ಮುಳುಗುತ್ತಿರುವ ವಿಡಿಯೋ ಬಿಡುಗಡೆಯಾಗಿದೆ.