ಪತ್ನಿಗೆ ಚುಡಾಯಿಸಿದ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಪತಿ.. ಸಿಸಿಟಿವಿ ದೃಶ್ಯ ನೋಡಿ - ಪತ್ನಿ ಚುಡಾಯಿಸಿದಕ್ಕಾಗಿ ಥಳಿತ
🎬 Watch Now: Feature Video
ತಿರುನಲ್ವೇಲಿ(ತಮಿಳುನಾಡು): ಹೋಟೆಲ್‌ನಲ್ಲಿ ಕುಳಿತುಕೊಂಡಿದ್ದ ಸಂದರ್ಭದಲ್ಲಿ ಪತ್ನಿಯನ್ನ ಚುಡಾಯಿಸಿದ್ದಕ್ಕಾಗಿ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಡೆದಿದೆ. ಇದರ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿವೆ. ತಿರುನಲ್ವೇಲಿಯ ಮುಕೂಡಲ್ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ. ಎಡಿಸನ್ ಎಂಬಾತ ಮುಂಬೈನಲ್ಲಿ ಕೆಲಸ ಮಾಡ್ತಿದ್ದು, ರಜೆ ಪಡೆದು ಊರಿಗೆ ವಾಪಸ್ ಆಗಿದ್ದನು. ಈ ವೇಳೆ ಸ್ನೇಹಿತರೊಂದಿಗೆ ಹೋಟೆಲ್ಗೆ ತೆರಳಿದ್ದು, ಎದುರುಗಡೆ ಟೇಬಲ್ ಮೇಲೆ ಕುಳಿತುಕೊಂಡಿದ್ದ ಮಹಿಳೆಯನ್ನು ಚುಡಾಯಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಆಕೆಯ ಪತಿ ಎಡಿಸನ್ಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ.