ಅಮಾನತಾದ 23 ಸಂಸದರಿಂದ ಮಹಾತ್ಮ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ - ಮಹಾತ್ಮ ಗಾಂಧಿ ಪ್ರತಿಮೆ ಮುಂದೆ ಧರಣಿ
🎬 Watch Now: Feature Video
ಅಗತ್ಯ ವಸ್ತುಗಳ ಮೇಲೆ ಜಿಎಸ್ಟಿ, ಸಂಸತ್ತಿನಲ್ಲಿ ಹಣದುಬ್ಬರದ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಸದನದ ಬಾವಿಗಿಳಿದು ಪ್ರತಿಭಟಿಸಿದ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಅಮಾನತಾದ 23 ಸಂಸದರು ಸಂಸತ್ ಆವರಣದ ಮುಂದಿರುವ ಮಹಾತ್ಮ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು. ತಮ್ಮನ್ನು ಅಮಾನತು ಮಾಡಿದ ಆದೇಶವನ್ನು ವಾಪಸ್ ಪಡೆಯಬೇಕು. ಚರ್ಚೆಗೆ ಅವಕಾಶ ನೀಡಬೇಕು ಎಂದು ಕೂಗಿದರು. ಡಿಎಂಕೆ, ಟಿಎಂಸಿ, ಕಾಂಗ್ರೆಸ್, ಆಪ್ನ ಸದಸ್ಯರು ಅಮಾನತಾಗಿದ್ದಾರೆ.
Last Updated : Jul 27, 2022, 1:58 PM IST