ವಿಶ್ವ ಸಾಗರ ದಿನಾಚರಣೆ: ಪ್ಲಾಸ್ಟಿಕ್ ಮಾಲಿನ್ಯದ ಜಾಗೃತಿ ಮೂಡಿಸಿದ ಮರಳು ಶಿಲ್ಪಿ - ನಮ್ಮ ಸಾಗರವನ್ನು ಉಳಿಸಿ
🎬 Watch Now: Feature Video
ಪುರಿ(ಒಡಿಶಾ): ಅಂತಾರಾಷ್ಟ್ರೀಯ ಖ್ಯಾತಿಯ ಮರಳು ಕಲಾವಿದ ಸುದರ್ಶನ್ ಪಟ್ಟನಾಯಕ್ ವಿಶ್ವ ಸಾಗರ ದಿನಾಚರಣೆ ನಿಮಿತ್ತ ಪುರಿ ಸಮುದ್ರದ ಕಡಲತೀರದಲ್ಲಿ ಸಾಗರ ಉಳಿಸಿ ಎಂಬ ಕಲಾಕೃತಿ ರಚಿಸಿದ್ದಾರೆ. ಪಟ್ನಾಯಕ್ ಅವರು ತಮ್ಮ ವಿದ್ಯಾರ್ಥಿಗಳ ಸಹಾಯದಿಂದ ಪುರಿ ಸಮುದ್ರದ ಕಡಲತೀರದಲ್ಲಿ 'ನಮ್ಮ ಸಾಗರವನ್ನು ಉಳಿಸಿ' ಎಂಬ ಸಂದೇಶದೊಂದಿಗೆ ಸುಂದರವಾದ ಮರಳು ಕಲೆಯನ್ನು ರಚಿಸಿದ್ದಾರೆ. ಈ ಮೂಲಕ ಸಮುದ್ರಕ್ಕೆ ಸೇರುತ್ತಿರುವ ಪ್ಲಾಸ್ಟಿಕ್ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಸಾಗರದಲ್ಲಾಗುತ್ತಿರುವ ಪ್ಲಾಸ್ಟಿಕ್ ಮಾಲಿನ್ಯ ತಡೆಯುವಂತೆ ಈ ಕಲೆಯ ಮುಖಾಂತರ ಜಾಗೃತಿ ಮೂಡಿಸಿದ್ದಾರೆ.