ವಿಡಿಯೋ: ಶ್ರೀಲಂಕಾದ ಪ್ರಧಾನಿ ಕುರ್ಚಿ ಕಾವಲಿಗೆ ನಿಂತ ಸೇನಾಪಡೆ
🎬 Watch Now: Feature Video
ಶ್ರೀಲಂಕಾ: ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು ಹಂಗಾಮಿ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಆರ್ಥಿಕ ಬಿಕ್ಕಟ್ಟಿನ ಮಧ್ಯೆಯೇ ಮಾಲ್ಡೀವ್ಸ್‌ಗೆ ಹೋಗಿರುವ ಅಧ್ಯಕ್ಷ ಗೊಟಬಯ ರಾಜಪಕ್ಸ ಇದೀಗ ಸಿಂಗಾಪುರಕ್ಕೆ ತೆರಳಲು ತಯಾರಿ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಾವಿರಾರು ಪ್ರತಿಭಟನಾಕಾರರು ಕೊಲಂಬೊದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಇದೀಗ ಸರ್ಕಾರಿ ಕಟ್ಟಡಗಳನ್ನು ತೆರವುಗೊಳಿಸುವುದಾಗಿ ತಿಳಿಸಿದ್ದಾರೆ. ಇನ್ನೊಂದೆಡೆ, ಪ್ರತಿಭಟನಾಕಾರರು ಪ್ರಧಾನಿ ಕಚೇರಿ ಪ್ರವೇಶಿಸಿದಂತೆ ಮತ್ತು ಪ್ರಧಾನಿ ಕುರ್ಚಿಯನ್ನು ನಾಶಪಡಿಸದಂತೆ ಮಿಲಿಟರಿ ಸಿಬ್ಬಂದಿ ಕಾವಲಿಗೆ ನಿಂತು ಕಾಪಾಡುತ್ತಿರುವ ದೃಶ್ಯ ಕಂಡುಬಂತು.