ಹುಬ್ಬಳ್ಳಿ ಇಸ್ಕಾನ್ ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಡಗರ - Krishna Janmashtami 2022
🎬 Watch Now: Feature Video
ಹುಬ್ಬಳ್ಳಿ: ಇಲ್ಲಿನ ಇಸ್ಕಾನ್ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿದ್ದು, ಅಪಾರ ಸಂಖ್ಯೆಯ ಭಕ್ತರು ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆದರು. ದೇಗುಲವನ್ನು ಹೂವು ಮತ್ತು ಆಭರಣಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಶ್ರೀಕೃಷ್ಣನಿಗೆ 110 ಕೆ.ಜಿ ತೂಕದ ಬೃಹತ್ ಗಾತ್ರದ ಲಡ್ಡು ನೈವೇದ್ಯವಾಗಿ ಅರ್ಪಿಸಲಾಯಿತು. 108 ವಿಧದ ಭಕ್ಷ್ಯಗಳನ್ನಿಟ್ಟು ಪೂಜಿಸಲಾಯಿತು. ತೊಟ್ಟಿಲೋತ್ಸವ ನಡೆಸಿ ಭಕ್ತರು ಸಂಭ್ರಮಿಸಿದರು. ಕೃಷ್ಣನಿಗೆ ಇಷ್ಟವಾದ ಗೀತೆಗಳ ಗಾಯನ ನಡೆಯಿತು. ರಾತ್ರಿ 9.30 ರಿಂದ 12 ಗಂಟೆವರೆಗೆ ಮಹಾ ಮಂಗಳಾರತಿ ನಡೆಯಲಿದೆ.