ಆಯುಧ ಪೂಜಾ ಹಿನ್ನೆಲೆ: ಗಜಪಡೆಗೆ ವಿಶೇಷ ಪೂಜೆ - ayudha pooja
🎬 Watch Now: Feature Video
ಮೈಸೂರು: ಆಯಧ ಪೂಜೆ ಹಿನ್ನೆಲೆ ಮೈಸೂರು ಅರಮನೆ ಆವರಣದಲ್ಲಿ ಗಜಪಡೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಅರಮನೆಯ ಕೋಡಿ ಸೋಮೇಶ್ವರ ದೇವಸ್ಥಾನದ ಬಳಿ 9 ಆನೆಗಳನ್ನು ಸಾಲಾಗಿ ನಿಲ್ಲಿಸಿ, ಪುರೋಹಿತರಾದ ಪ್ರಹ್ಲಾದ್ ಜೋಶಿ ಅವರ ಮಾರ್ಗದರ್ಶನದಲ್ಲಿ ಡಿಸಿಎಫ್ ಕರಿಕಾಳನ್ ಹಾಗೂ ಅಧಿಕಾರಿಗಳು ಪೂಜೆ ಸಲ್ಲಿಸಿದರು. ಆನೆಗಳ ಮುಂದೆ ಅಂಕುಶ, ದಂತಕ್ಕೆ ಹಾಕುವ ಕವಚ, ನಮ್ದಾ ಗಾದಿಯನ್ನು ಇಟ್ಟು ಪೂಜೆ ಸಲ್ಲಿಸಲಾಯಿತು. ಆನೆಗಳಿಗೆ ಕಬ್ಬು, ಬಾಳೆ ಹಣ್ಣು, ತೆಂಗಿನಕಾಯಿ, ಬೆಲ್ಲ ನೀಡಲಾಯಿತು. ನಾಳೆ ಜಂಬೂಸವಾರಿ ಮೆರವಣಿಗೆ ಇದೆ.