ಭಾರತಕ್ಕೆ ಬಂದಿಳಿದ ವಿಶೇಷ ಚೀತಾಗಳು.. ಆಫ್ರಿಕಾದಿಂದ ಹೊತ್ತುತಂದ ವಿಶೇಷ ಕಾರ್ಗೋ ವಿಮಾನ - ಪ್ರಧಾನಿ ಮೋದಿ ಹುಟ್ಟುಹಬ್ಬ
🎬 Watch Now: Feature Video
ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಅಳವಿನ ಅಂಚಿನಲ್ಲಿರುವ ದಕ್ಷಿಣ ಆಫ್ರಿಕಾದ ಚೀತಾಗಳನ್ನು ಭಾರತಕ್ಕೆ ಕರೆತರಲಾಗಿದೆ. ನಮೀಬಿಯಾದಿಂದ ವಿಶೇಷ ಕಾರ್ಗೋ ವಿಮಾನದ ಮೂಲಕ ಇವುಗಳ ಆಗಮನವಾಗಿದ್ದು, ಈಗಾಗಲೇ ಮಧ್ಯಪ್ರದೇಶದ ಗ್ವಾಲಿಯರ್ ಏರ್ಪೋರ್ಟ್ನಲ್ಲಿ ಲ್ಯಾಂಡ್ ಆಗಿವೆ. ಇದೀಗ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಕರೆತರಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಇವುಗಳನ್ನು ಅರಣ್ಯಕ್ಕೆ ರಿಲೀಸ್ ಮಾಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ 72 ನೇ ಜನ್ಮದಿನದಂದು ಎಲ್ಲಾ ಆಫ್ರಿಕನ್ ಚಿರತೆಗಳನ್ನು ವೈಯಕ್ತಿಕವಾಗಿ ಸ್ವಾಗತಿಸಲಿದ್ದಾರೆ. ಎಂಟು ಚಿರತೆಗಳಲ್ಲಿ 5 ಹೆಣ್ಣು ಮತ್ತು 3 ಗಂಡು ಚೀತಾಗಳು ಸೇರಿವೆ. ಇವು 4 ರಿಂದ 6 ವರ್ಷದ ಚೀತಾಗಳು ಎಂದು ಹೇಳಲಾಗುತ್ತಿದೆ. ಬರೋಬ್ಬರಿ 70 ವರ್ಷಗಳ ಬಳಿಕ ಭಾರತಕ್ಕೆ ಇವುಗಳ ಆಗಮನವಾಗಿದೆ.