ಶ್ರಾವಣ ಸೋಮವಾರದ ಮುನ್ನವೇ ವಿಧಾನಸೌಧದಲ್ಲಿ ನಾಗರ ಹಾವು ಪ್ರತ್ಯಕ್ಷ..! - ಬೆಂಗಳೂರಿನಲ್ಲಿ ವಿಧಾನಸೌಧ ಆವರಣದ ರಸ್ತೆಯಲ್ಲಿ ಹಾವು ಪ್ರತ್ಯಕ್ಷ
🎬 Watch Now: Feature Video
ಈ ಸೋಮವಾರದಿಂದ ಶ್ರಾವಣ ಮಾಸ ಆರಂಭವಾಗುತ್ತಿದೆ. ಹಬ್ಬ ಮಾಡುವವರು ನಾಗಪ್ಪನ ಮೂರ್ತಿಗೆ ಹಾಲೆರೆಯುವುದು ಸಾಮಾನ್ಯ. ಆದರೆ ಹಬ್ಬದ ಮುನ್ನ ವಿಧಾನಸೌಧದ ಆವರಣದಲ್ಲಿ ದಿಢೀರನೇ ನಾಗರ ಹಾವು ಪ್ರತ್ಯಕ್ಷವಾಗಿದೆ. ಆವರಣದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಎದುರಿರುವ ರಸ್ತೆಯ ಒಂದು ಕಡೆಯಿಂದ ಮತ್ತೊಂದು ಕಡೆಗೆ ಚಲಿಸುತ್ತಾ ಮುಂದೆ ಸಾಗಿತು.
Last Updated : Jul 24, 2022, 7:33 AM IST