ಆಟವಾಡ್ತಿದ್ದ ಬಾಲಕನ ಮೇಲೆ ಬಿತ್ತು ಯಂತ್ರ.. ಕ್ಷಣಾರ್ಧದಲ್ಲಿ ಹಾರಿಹೋಯ್ತು ಪ್ರಾಣಪಕ್ಷಿ - ಮಗುವಿನ ಮೇಲೆ ಯಂತ್ರ ಬಿದ್ದು ಸಾವು

🎬 Watch Now: Feature Video

thumbnail

By

Published : Jul 7, 2022, 3:33 PM IST

ಪುಣೆ(ಮಹಾರಾಷ್ಟ್ರ): ಆಟವಾಡ್ತಿದ್ದ ಬಾಲಕನೊಬ್ಬನ ಮೇಲೆ ಯಂತ್ರವೊಂದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದ್ದು, ಅದರ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪಿಪ್ರಿ ಚಿಂಚ್​ವಾಡ್​ ನಗರದ ಪಿಂಪಲ್​ ಗುರವ್​ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೃತ ಬಾಲಕನನ್ನ ಯುವನ್​(6) ಎಂದು ಗುರುತಿಸಲಾಗಿದೆ. ತಾಯಿ ಜೊತೆ ಕಾರು ವಾಷಿಂಗ್​ ಸೆಂಟರ್​​ಗೆ ಆಗಮಿಸಿದ್ದ ಯುವನ್ ಸ್ಥಳದಲ್ಲಿ ಆಟವಾಡುತ್ತಿದ್ದನು. ಈ ವೇಳೆ, ಬೃಹತ್ ಕಬ್ಬಿಣದ ಯಂತ್ರವೊಂದು ಆತನ ಮೇಲೆ ಬಿದ್ದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮಗುವನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ, ಆತ ಸಾವನ್ನಪ್ಪಿದ್ದಾನೆಂದು ವೈದ್ಯರು ಘೋಷಣೆ ಮಾಡಿದ್ದಾರೆ. ಅಂಗಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.​

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.