ಸೋಲಿಲ್ಲದ ಸರದಾರನ ಮಣಿಸಲು 88ರ ಟೈಗರ್ ಕಣಕ್ಕೆ..! ಹುಲಿ ಗೆದ್ದು ಬರುತ್ತಾ? - ಹಾಲಿ ಸಂಸದ ಜಿಎಂ ಸಿದ್ದೇಶ್ವರ್
🎬 Watch Now: Feature Video
ದಾವಣಗೆರೆ : ಬಿಜೆಪಿ ಭದ್ರಕೋಟೆ ಅಂತಾನೇ ಕರೆಸಿಕೊಳ್ಳುವ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಮಾವ ಅಳಿಯನ ವಾರ್ ಶುರುವಾಗಿದೆ. ಕಮಲ ಪಡೆಯ ಹುರಿಯಾಳಾಗಿ ಹಾಲಿ ಸಂಸದ ಜಿ.ಎಂ. ಸಿದ್ದೇಶ್ವರ್ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ ನಿಂದ ಹಿರಿಯ ಶಾಸಕರೂ ಆದ 88 ರ ಹರೆಯದ ಶಾಮನೂರು ಶಿವಶಂಕರಪ್ಪ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಸೋಲಿಲ್ಲದ ಸರದಾರ ಸಿದ್ದೇಶ್ವರ್ ರನ್ನ ಮಣಿಸಲು ಕಾಂಗ್ರೆಸ್ ಹೈಕಮಾಂಡ್ ಹಿರಿ ತಲೆ ಕಣಕ್ಕಿಳಿಸಲು ಮುಂದಾಗಿದೆ. ಈಗಾಗಲೇ ಟಿಕೆಟ್ ಅನ್ನು ಶಾಮನೂರು ಅವರಿಗೆ ಘೋಷಿಸಿದೆ. ಈ ಮೂಲಕ ಮತ್ತೆ ಜಿಲ್ಲೆಯಲ್ಲಿ ಕಮಲ ಮುದುಡುವಂತೆ ಮಾಡುವ ಪ್ಲಾನ್ ಮಾಡಿದೆ.