ಕಾರು ಸಮೇತ ಅಲಕಾನಂದ ನದಿಗೆ ಬಿದ್ದ ವ್ಯಕ್ತಿ: ಎಸ್‌ಡಿಆರ್‌ಎಫ್ ಸಿಬ್ಬಂದಿಯಿಂದ ರಕ್ಷಣೆ - ನದಿಗೆ ಬಿದ್ದ ವ್ಯಕ್ತಿ
🎬 Watch Now: Feature Video
ಉತ್ತರಾಖಂಡ: ಶ್ರೀನಗರದ ಹುಂಡೈ ಶೋರೂಂನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಕೆಲಸ ಮುಗಿಸಿ ತನ್ನ ಕಾರಿನಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿ 58ರ ಬಳಿ ತಲುಪುವಾಗ ಕಾರು ನಿಯಂತ್ರಣ ತಪ್ಪಿ ಅಲಕಾನಂದಾ ನದಿಗೆ 60 ಮೀಟರ್ ಕೆಳಗೆ ಬಿದ್ದಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಎಸ್‌ಡಿಆರ್‌ಎಫ್ ಸಿಬ್ಬಂದಿ ಸತತ ಒಂದೂವರೆ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ವ್ಯಕ್ತಿಯನ್ನು ರಕ್ಷಿಸಿದ್ದಾರೆ. ಬಳಿಕ ಅವರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ವ್ಯಕ್ತಿಯನ್ನು ಗೌರವ್ ಮಿಯಾನ್ (32) ಎಂದು ಗುರುತಿಸಲಾಗಿದೆ.