DDLJ ಸಿನಿಮಾದ ‘ಆವೊ ಆವೊ’ ದೃಶ್ಯ ಮರುಸೃಷ್ಟಿಗೆ ಸಾರಾ ಯತ್ನ: ವಿಡಿಯೋ - ಸಾರಾ ಹೇರ್ ಡಿಸೈನರ್ ಸ್ಯಾಂಕಿ ಎವ್ರಸ್
🎬 Watch Now: Feature Video
ಹೈದರಾಬಾದ್: ನಟಿ ಸಾರಾ ಅಲಿಖಾನ್ ಇನ್ಸ್ಟಾಗ್ರಾಂನಲ್ಲಿ ‘ನಮಸ್ತೆ ದರ್ಶಕೋ’ ಕಾಮಿಡಿ ಸೀರೀಸ್ನ ಮತ್ತೊಂದು ವಿಡಿಯೋ ಕ್ಲಿಪ್ ಹಂಚಿಕೊಂಡಿದ್ದಾರೆ. ಇದರಲ್ಲಿ, ಶಾರೂಖ್ಖಾನ್ ಶೈಲಿಯಲ್ಲಿ ಪಾರಿವಾಳಗಳಿಗೆ ಕಾಳು (ಆಹಾರ) ಹಾಕುತ್ತಿದ್ದಾರೆ. ಈ ವಿಡಿಯೋದಲ್ಲಿ ಸಾರಾ, ಹೇರ್ ಡಿಸೈನರ್ ಸ್ಯಾಂಕಿ ಎವ್ರಸ್ ಜತೆ ಕಾಣಿಸಿಕೊಂಡಿದ್ದಾರೆ. ಇಂದು ಸ್ಯಾಂಕಿ ಎವ್ರಸ್ ಅವರ ಜನ್ಮ ದಿನವಾಗಿದ್ದು, ಇದು ಅವರ ಹುಟ್ಟುಹಬ್ಬಕ್ಕೆ ನೀಡುತ್ತಿರುವ ಉಡುಗೊರೆ ಎಂದಿದ್ದಾರೆ. ನಟ ಅಮೃಶ್ ಪುರಿ ಮತ್ತು ಶಾರುಖ್ ಖಾನ್ ನಟಿಸಿರುವ DDLJ ಸಿನಿಮಾದ ಆವೊ ಆವೊ ದೃಶ್ಯವನ್ನು ಮರು ಸೃಷ್ಟಿಸಲು ಸಾರಾ ಪ್ರಯತ್ನಿಸಿದ್ದಾರೆ.