ಮರಳಿನಲ್ಲಿ ಮುರ್ಮು ಕಲಾಕೃತಿ ಬಿಡಿಸಿ ವಿಶೇಷವಾಗಿ ಶುಭಕೋರಿದ ಕಲಾವಿದ ಪಟ್ನಾಯಕ್​.. ವಿಡಿಯೋ - ಮರಳು ಕಲಾವಿದ ಸುದರ್ಶನ್​ ಪಟ್ನಾಯಕ್​

🎬 Watch Now: Feature Video

thumbnail

By

Published : Jun 24, 2022, 5:18 PM IST

ಪುರಿ(ಒಡಿಶಾ) : ರಾಷ್ಟ್ರಪತಿ ಚುನಾವಣೆಗೆ ಎನ್​ಡಿಎ ಅಭ್ಯರ್ಥಿಯಾದ ದ್ರೌಪದಿ ಮುರ್ಮು ಅವರಿಗೆ ಒಡಿಶಾದ ಮರಳು ಕಲಾವಿದ ಸುದರ್ಶನ್​ ಪಟ್ನಾಯಕ್​ ವಿಶೇಷವಾಗಿ ಶುಭ ಕೋರಿದ್ದಾರೆ. ಪುರಿಯ ಕಡಲ ತೀರದಲ್ಲಿ ಮುರ್ಮು ಅವರ ಮರಳಿನ ಕಲಾಕೃತಿ ಬಿಡಿಸಿ, 'ಮೇರಾ ಭಾರತ್ ಮಹಾನ್​, ದ್ರೌಪದಿ ಮುರ್ಮ ಅವರಿಗೆ ಶುಭವಾಗಲಿ' ಎಂದು ಕಲಾವಿದ ಪಟ್ನಾಯಕ್​ ಆಶಿಸಿದ್ದಾರೆ. ಈ ಕಲಾಕೃತಿ ನೋಡಲು ಜನರು ಸಹ ಆಗಮಿಸಿದ್ದು, ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಇನ್ನು, ಮುರ್ಮು ಮೂಲತಃ ಒಡಿಶಾದವರೇ ಆಗಿದ್ದು, ಇಂದು ನವದೆಹದಲ್ಲಿ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.