ಮಕ್ಕಳ ಕಳ್ಳರ ವದಂತಿ: ವಿಜಯಪುರದಲ್ಲಿ ಅಪರಿಚಿತನ ಮೇಲೆ ಸ್ಥಳೀಯರಿಂದ ಹಲ್ಲೆ
🎬 Watch Now: Feature Video
ವಿಜಯಪುರ: ಮಕ್ಕಳ ಕಳ್ಳರ ವದಂತಿಗೆ ಅಮಾಯಕರು ಬಲಿಯಾಗುತ್ತಿದ್ದಾರೆ. ಮಕ್ಕಳ ಕಳ್ಳನೆಂದು ಅಪರಿಚಿತ ಯುವಕನನ್ನು ಹಿಡಿದು ಸ್ಥಳೀಯರು ಥಳಿಸಿರುವ ಘಟನೆ ವಿಜಯಪುರ ನಗರದ ಖಾಲಿಬಾಗ್ ಕ್ರಾಸ್ ಬಳಿ ಕಳೆದ ರಾತ್ರಿ ನಡೆದಿದೆ. ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸದ್ಯ ಅಪರಿಚಿತ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಜಯಪುರ ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.