ಮೈಸೂರು: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಶುಭ ಶುಕ್ರವಾರವಾದ ಇಂದು ನಾಡಿನ ಅದಿದೇವತೆ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ವಿಶೇಷ ಪೂಜೆ ಬಳಿಕ ಮಾಧ್ಯಮಾಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ದೇವಾಲಯದಿಂದ ಹಾಗೆಯೇ ಹೊರಟು ಹೋದರು.
ಪೂಜೆ ಬಳಿಕ ದೇವಾಲಯದ ಒಳಗೆ ಸ್ವಲ್ಪ ಕಾಲ ವಿಶ್ರಾಂತಿ ಪಡೆದ ಶಾಸಕರು, ದೇವಾಲಯದ ಒಳಗಿರುವ ವಿನಾಯಕಸ್ವಾಮಿ ಮತ್ತು ಆಂಜನೇಯಸ್ವಾಮಿಗೂ ಪೂಜೆ ಸಲ್ಲಿಸಿದರು.
ಬಳಿಕ ದೇವಾಲಯದ ಹೊರಭಾಗದಲ್ಲಿ ಅಭಿಮಾನಿಗಳಿಗೆ ಸೆಲ್ಫಿ ನೀಡಿದರು. ಈ ವೇಳೆ ಮಾಧ್ಯಮಗಳು ಅವರ ಪತ್ರಿಕ್ರಿಯೆ ಪಡೆಯಲು ಕರೆದಾಗ ಕೈ ಮುಗಿದು ಅಲ್ಲಿಂದ ಹೊರಟೇ ಹೋದರು.
ಈ ಸಂದರ್ಭದಲ್ಲಿ ಭಕ್ತರ ಸಾಲಿನಲ್ಲಿದ್ದ ಒಬ್ಬ, ಯಡಿಯೂರಪ್ಪ ಅವರಿಗೆ ಜೈ...! ವಿಜಯೇಂದ್ರಗೆ ಜೈ..! ಎಂದು ಘೋಷಣೆ ಕೂಗಿದ ಘಟನೆಯೂ ನಡೆಯಿತು.
ಇಂದು ನಾಡಿನ ಅದಿದೇವತೆ ದರ್ಶನ ಪಡೆಯಲು ಆಗಮಿಸಿದ ಯತ್ನಾಳ್ ಜೊತೆ ಬೇರೆ ಯಾರೂ ರೆಬಲ್ ಶಾಸಕರಾಗಲಿ, ಮಾಜಿ ಶಾಸಕರಾಗಲಿ, ಮಾಜಿ ಸಂಸದ ಪ್ರತಾಪ್ ಸಿಂಹ ಅವರಾಗಲಿ ಇರಲಿಲ್ಲ. ಕಳೆದ ವಾರ ಮಾಜಿ ಶಾಸಕ ಕುಮಾರ ಬಂಗಾರಪ್ಪ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಇತರರು ದೇವಿಯ ದರ್ಶನ ಪಡೆದಿದ್ದರು.
ಇದನ್ನೂ ಓದಿ: ಸವದತ್ತಿ ಯಲ್ಲಮ್ಮ ದೇವಿ ಜಾತ್ರೆಗೆ ಹುಬ್ಬಳ್ಳಿ, ನವಲಗುಂದದಿಂದ ವಿಶೇಷ ಬಸ್ - SAVADATTI YALLAM FAIR