ಕ್ಯಾಶ್ ವ್ಯಾನ್ ಮೇಲೆ ದಾಳಿ: ಒಂದು ಕೋಟಿ ರೂಪಾಯಿ ದೋಚಿದ ದರೋಡೆಕೋರರು! - ಹಣ ದೋಚಿ ಪರಾರಿಯಾದ ದುಷ್ಕರ್ಮಿಗಳು
🎬 Watch Now: Feature Video
ಗುರುಗ್ರಾಮ್(ಹರಿಯಾಣ): ಹಣ ತುಂಬಿಕೊಂಡು ಹೋಗುತ್ತಿದ್ದ ವ್ಯಾನ್ ಮೇಲೆ ದಾಳಿ ನಡೆಸಿರುವ ದರೋಡೆಕೋರರು ಬರೋಬ್ಬರಿ 1 ಕೋಟಿ ರೂಪಾಯಿ ದೋಚಿ ಪರಾರಿಯಾಗಿದ್ದಾರೆ. ಹರಿಯಾಣದ ಗುರುಗ್ರಾಮ್ನಲ್ಲಿ ಘಟನೆ ನಡೆದಿದೆ. ವ್ಯಾನ್ ಸಿಬ್ಬಂದಿ ಮೇಲೆ ಖಾರದ ಪುಡಿ ಎರಚಿರುವ ದುಷ್ಕರ್ಮಿಗಳು, ತದನಂತರ ಶಸ್ತ್ರಾಸ್ತ್ರಗಳನ್ನ ತೋರಿಸಿ ಕೃತ್ಯ ಎಸಗಿದ್ದಾರೆ. ಕಳೆದ ಕೆಲ ದಿನಗಳಿಂದ ಸಂಚು ರೂಪಿಸಿ, ಈ ದುಷ್ಕೃತ್ಯವೆಸಗಲಾಗಿದೆ ಎಂದು ತಿಳಿದು ಬಂದಿದೆ.