ವಿಡಿಯೋ: ಗುಂಟೂರು ಮೆಣಸಿನಕಾಯಿಗೆ ಬಂಗಾರದ ಬೆಲೆ.. ಕ್ವಿಂಟಲ್​ಗೆ 24 ರಿಂದ 25 ಸಾವಿರ!

🎬 Watch Now: Feature Video

thumbnail

By

Published : Jul 9, 2022, 4:25 PM IST

Updated : Jul 9, 2022, 9:06 PM IST

ಗುಂಟೂರು(ಆಂಧ್ರಪ್ರದೇಶ) : ದೇಶದ ಮಾರುಕಟ್ಟೆಯಲ್ಲಿ ಗುಂಟೂರು ಮೆಣಸಿನಕಾಯಿಗೆ ಹೆಚ್ಚು ಬೇಡಿಕೆ ಇದೆ. ಆದರೆ, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಈ ಸಲ ದಾಖಲೆಯ ಗರಿಷ್ಠ ಬೆಲೆಗೆ ಮಾರಾಟವಾಗುತ್ತಿದೆ. ಸೂಪರ್​ 10 ಮತ್ತು ನಾನ್​ ಪ್ರೀಮಿಯಂ ತಳಿಗಳು ಕ್ವಿಂಟಲ್​​ಗೆ 7 ರಿಂದ 9 ಸಾವಿರಕ್ಕೆ ಮಾರಾಟವಾಗ್ತಿವೆ. ಮುಖ್ಯವಾಗಿ 334,341, ಹಾಗೂ 273 ನಂಬರ್​ ತಳಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇವೆಲ್ಲವೂ ಪ್ರತಿ ಕ್ವಿಂಟಲ್​​ಗೆ 24ರಿಂದ 25 ಸಾವಿರಕ್ಕೆ ಮಾರಾಟವಾಗುತ್ತಿವೆ. ಕಳೆದ ಋತುವಿನಲ್ಲಿ ಕೀಟಬಾಧೆಯಿಂದ ಬೆಳೆ ಹಾನಿಯಾಗಿದೆ. ಹೀಗಾಗಿ, ಈ ಸಲ ಬಂಗಾರದ ಬೆಲೆ ಬಂದಿದೆ. ಆದರೂ, ರೈತರು ಮಾತ್ರ ನಾವು ಹಾಕಿರುವ ಬಂಡವಾಳ ವಾಪಸ್ ಬಂದಿಲ್ಲ ಎನ್ನುತ್ತಾರೆ. ಇದರಿಂದ ಕೇವಲ ವ್ಯಾಪಾರಿಗಳು ಲಾಭ ಪಡೆದುಕೊಳ್ಳುತ್ತಿದ್ದಾರೆಂಬ ಆರೋಪ ಮಾಡಿದ್ದಾರೆ.
Last Updated : Jul 9, 2022, 9:06 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.