ಬಲು ಅಪರೂಪ ಇವರ ಜೋಡಿ.. ನೋಡಿದವರನ್ನ ಮಾಡ್ತಿದೆ ಮೋಡಿ! - ನಾಯಿ ಕೋತಿ ಸ್ನೇಹ ಸುದ್ದಿ
🎬 Watch Now: Feature Video

ಬುದ್ದಿವಂತ ಪ್ರಾಣಿ ಎನ್ನಿಸಿಕೊಂಡಿರುವ ಮನುಷ್ಯ ಸಣ್ಣ-ಪುಟ್ಟ ವಿಚಾರಗಳಿಗೂ ಜಗಳವಾಡಿಕೊಂಡು ಕೋರ್ಟ್ ಮೆಟ್ಟಿಲು ಹತ್ತುವ ಈ ಕಾಲದಲ್ಲಿ ಕೋರ್ಟ್ ಆವರಣದಲ್ಲೇ ಸ್ನೇಹ ಸಂದೇಶ ಸಾರುವ ಉತ್ತಮ ನಿದರ್ಶನ ಕಾಣಸಿಕ್ಕಿದೆ. ಮೈಸೂರು ಜಿಲ್ಲೆಯ ನಂಜನಗೂಡಿನ ನ್ಯಾಯಾಲಯದ ಆವರಣದಲ್ಲಿ ಕಳೆದ 15 ದಿನಗಳಿಂದ ಕೋತಿಯೊಂದು ನಾಯಿಗಳೊಂದಿಗೆ ಕೂಡಿ ಆಡುವುದನ್ನು ಕಂಡು ಜನ ಫಿದಾ ಆಗಿದ್ದಾರೆ.