ರಸ್ತೆಗುಂಡಿ ಮುಚ್ಚಲು ಆಗ್ರಹ; ಮಳೆ ನೀರು ತುಂಬಿದ ಗುಂಡಿಗಳಲ್ಲೇ ಕುಳಿತು ಪ್ರತಿಭಟನೆ - ತುಮಕೂರು ಮಹಾನಗರ ಪಾಲಿಕೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-15547873-thumbnail-3x2-road.jpg)
ತುಮಕೂರು ನಗರದ ರಸ್ತೆಗಳಲ್ಲಿ ನಿರ್ಮಾಣವಾಗಿರುವ ಗುಂಡಿಗಳನ್ನು ಮುಚ್ಚುವಂತೆ ಆಗ್ರಹಿಸಿ ಮಾನವ ಹಕ್ಕುಗಳ ಹೋರಾಟ ಕೇಂದ್ರದ ಕಾರ್ಯಕರ್ತರು ಮಳೆ ನೀರು ತುಂಬಿದ್ದ ರಸ್ತೆ ಗುಂಡಿಗಳಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿದರು. ಕುಣಿಗಲ್ ರಸ್ತೆಯಲ್ಲಿ ಎಸ್ಎಸ್ಐಟಿ ಕಾಲೇಜು ಮುಂಭಾಗ ಈ ರೀತಿ ವಿನೂತನ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರ ಬಳಿಗೆ ಪಿಡಬ್ಲ್ಯೂಡಿ ಎ.ಇ.ಸಿದ್ದಪ್ಪ ಹಾಗೂ ಪಾಲಿಕೆ ಆಯುಕ್ತೆ ರೇಣುಕಾ ಆಗಮಿಸಿ, ಇನ್ನೆರಡು ತಿಂಗಳುಗಳಲ್ಲಿ ರಸ್ತೆ ಗುಂಡಿಗಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯುವುದಾಗಿ ಭರವಸೆ ನೀಡಿದರು.