ಭಾರತ-ಚೀನಾ ಸಂಘರ್ಷ: ವೈರಿಯ ವಿರುದ್ಧ ದೇಶದ ಹಲವೆಡೆ ಪ್ರತಿಭಟನೆ - india china news live
🎬 Watch Now: Feature Video
ಲಖನೌ(ಉತ್ತರಪ್ರದೇಶ): ಪೂರ್ವ ಲಡಾಖ್ನಲ್ಲಿ ನಡೆದ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಚೀನಾ ವಿರುದ್ಧ ಭಾರತದ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಉತ್ತರ ಪ್ರದೇಶ ವಾರಣಾಸಿಯಲ್ಲಿ ಹಲವು ಸಂಘಟನೆಗಳ ಸದಸ್ಯರು ಚೀನಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದರ ಜೊತೆಗೆ ಹುತಾತ್ಮರಾದ ಭಾರತೀಯ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಕಾನ್ಪುರದಲ್ಲಿ ಸಂಘಟನೆಯೊಂದು ಚೀನಿ ವಸ್ತುಗಳನ್ನು ಖರೀದಿಸದಂತೆ ಜನರಲ್ಲಿ ಆಗ್ರಹಿಸಿತು.