ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪಾನಮತ್ತ ಪೊಲೀಸ್ ಕಾನ್ಸ್​​ಟೇಬಲ್​​: ವಿಡಿಯೋ ವೈರಲ್​​ - ಕುಡಿದ ಮತ್ತಿನಲ್ಲಿ ಕಾರು ಚಲಾಯಿಸುತ್ತಿದ್ದ ಪೊಲೀಸ್ ವಿಡಿಯೋ ವೈರಲ್​​

🎬 Watch Now: Feature Video

thumbnail

By

Published : Jun 11, 2022, 12:28 PM IST

Updated : Jun 11, 2022, 12:37 PM IST

ಬರ್ನಾಲ(ಪಂಜಾಬ್​​): ಕುಡಿದ ಮತ್ತಿನಲ್ಲಿ ಕಾರು ಚಲಾಯಿಸುತ್ತಿದ್ದ ಪೊಲೀಸ್ ಕಾನ್ಸ್​​ಟೇಬಲ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ ಯುವಕನ ಕಾಲು ಮುರಿದು ಮತ್ತೊಬ್ಬನಿಗೆ ಗಂಭೀರ ಗಾಯಗಳಾಗಿವೆ. ಬರ್ನಾಲ ಜಿಲ್ಲೆಯ ಬಜಖಾನ ರಸ್ತೆಯ ಸೇತುವೆ ಮೇಲೆ ಈ ಘಟನೆ ನಡೆದಿದೆ. ಪ್ರಕರಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪೊಲೀಸ್ ಕಾನ್ಸ್​​ಟೇಬಲ್ ಅಮಲಿನಲ್ಲಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಸ್ಥಳಕ್ಕೆ ಆಗಮಿಸಿದ ಬರ್ನಾಲಾ ಪೊಲೀಸ್ ಸಿಬ್ಬಂದಿ ಚಾಲಕ(ಪೊಲೀಸ್ ಕಾನ್ಸ್​​ಟೇಬಲ್)ನನ್ನು ಕರೆದೊಯ್ದಿದ್ದಾರೆ. ಇನ್ನು ಸ್ಥಳದಲ್ಲಿದ್ದ ಸಾರ್ವಜನಿಕರು ಪೊಲೀಸ್ ಕಾನ್ಸ್​​ಟೇಬಲ್ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
Last Updated : Jun 11, 2022, 12:37 PM IST

For All Latest Updates

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.