ಬಲವಂತವಾಗಿ ಹಾಲಿನ ಬೂತ್ ಮುಚ್ಚಿಸಿದ ಪೊಲೀಸರು: ಸಿಸಿಟಿವಿಯಲ್ಲಿ ದೃಶ್ಯ ಸೆರೆ - curfew news in mysore
🎬 Watch Now: Feature Video
ಮೈಸೂರು ನಗರದ ಸರಸ್ವತಿ ಪುರಂನಲ್ಲಿ, ಜನತಾ ಕರ್ಫ್ಯೂ ಇರುವುದರಿಂದ ಜನರಿಗೆ ತೊಂದರೆಯಾಗದಿರಲೆಂದು ಬೆಳಗ್ಗೆ 3 ಗಂಟೆಗೆ ಹಾಲಿನ ಬೂತ್ ಮಾಲಿಕ ಹಾಲು ತರಿಸಿ, ಮಾರಾಟ ಮಾಡಲು ಮುಂದಾಗಿದ್ದಾರೆ. ಈ ವೇಳೆ ಅಲ್ಲಿಗೆ ಆಗಮಿಸಿದ ಪೊಲೀಸರು ಬಲವಂತವಾಗಿ ಹಾಲಿನ ಬೂತ್ ಅನ್ನು ಮುಚ್ಚಿಸಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತಾನು ಜನರಿಗೆ ಅಗತ್ಯ ವಸ್ತುಗಳ ಪೂರೈಕೆ ಮಾಡುತ್ತಿದ್ದು, ಸರಸ್ವತಿ ಪುರಂ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದು ಬೂತ್ ಮಾಲೀಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.