'ಭಾರತದ ನಂಬಿಕಸ್ಥ ಸ್ನೇಹಿತ ಶಿಂಜೋ ಅಬೆ ನಮ್ಮೊಂದಿಗಿಲ್ಲ': ಆಪ್ತ ಸ್ನೇಹಿತನ ನೆನೆದು ನಮೋ ಭಾವುಕ! - arun jaitley memorial lecture
🎬 Watch Now: Feature Video
ನವದೆಹಲಿ: ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಇಂದು ನಿಧನರಾಗಿದ್ದಾರೆ. ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಅವರು ಪ್ರಾಣ ಕಳೆದುಕೊಂಡಿದ್ದು, ಘಟನೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ನಿಧನಕ್ಕೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದರು. ದೆಹಲಿಯಲ್ಲಿ ಆಯೋಜನೆಗೊಂಡಿದ್ದ 'ಅರುಣ್ ಜೇಟ್ಲಿ ಸ್ಮಾರಕ ಉಪನ್ಯಾಸ'ದಲ್ಲೂ ಪ್ರಧಾನಿ ನರೇಂದ್ರ ಮೋದಿ ಕಂಬನಿ ಮಿಡಿದಿದ್ದಾರೆ. ಇಂದು ನನಗೆ ಅಸಹನೀಯ ನೋವಿನ ದಿನ. ನನ್ನ ಆಪ್ತ ಸ್ನೇಹಿತ ಹಾಗೂ ಜಪಾನ್ನ ಮಾಜಿ ಪ್ರಧಾನಿ ಶಿಂಜೋ ಅಬೆ ಈಗ ನಮ್ಮೊಂದಿಗಿಲ್ಲ. ಅವರು ಭಾರತದ ನಂಬಿಕಸ್ಥ ಸ್ನೇಹಿತರೂ ಆಗಿದ್ದರು. ತಾಂತ್ರಿಕವಾಗಿ ಭಾರತ ಇಷ್ಟೊಂದು ಮುಂದುವರೆಯಲೂ ಅವರ ಸಹಕಾರ ತುಂಬಾ ಇದೆ ಎಂದಿದ್ದು, ಅವರಿಗೆ ಮತ್ತೊಮ್ಮೆ ಹೃತ್ಪೂರ್ವಕ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಎಂದಿದ್ದಾರೆ.