ಸಿಎಂ ಧಾಮಿ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಆವರಿಸಿದ ಧೂಳು: ಆತಂಕಕ್ಕೊಳಗಾದ ಜನತೆ - ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಆವರಿಸಿದ ಧೂಳು
🎬 Watch Now: Feature Video
ಉತ್ತರಾಖಂಡ: ವಿಕಾಸ ನಗರದ ಕಲ್ಸಿಯ ಪಂಜಿತಿಲಾನಿಯಲ್ಲಿ ಆಯೋಜಿಸಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಸಮಾರಂಭದಲ್ಲಿ ಸಿಎಂ ಪುಷ್ಕರ್ ಸಿಂಗ್ ಧಾಮಿ ಭಾಗವಹಿಸಿದ್ದರು. ಪಾರ್ವತಿಯ ಪ್ರಗತಿ ಮಂಡಲ ಸಮಿತಿ, ಪಂಜಿತಿಲಾನಿ ಹಾಗೂ ಆಡಳಿತ ಮಂಡಳಿ ವತಿಯಿಂದ ಕ್ರೀಡಾ ಮೈದಾನದಲ್ಲಿ ಹೆಲಿಪ್ಯಾಡ್ ನಿರ್ಮಿಸಲಾಗಿದ್ದು, ಮೈದಾನದ ಸುತ್ತ ಅಪಾರ ಸಂಖ್ಯೆಯಲ್ಲಿ ಪ್ರೇಕ್ಷಕರು ನೆರೆದಿದ್ದರು. ಈ ವೇಳೆ ಸಿಎಂ ಧಾಮಿ ಹೆಲಿಕಾಪ್ಟರ್ ಲ್ಯಾಂಡ್ ಆದ ಕೂಡಲೇ ಧೂಳು ಆವರಿಸಿದೆ. ಇದರಿಂದ ಕೆಲಕಾಲ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದೇ ವೇಳೆ, ಸಿಎಂ ಧಾಮಿ ಮಾತನಾಡಿ, ಬಾಲ್ಯದಲ್ಲಿ ನಾನೂ ಕೂಡ ಹೆಲಿಕಾಪ್ಟರ್ ನೋಡಿ ಓಡುತ್ತಿದ್ದೆ. ಧೂಳು ಹಾರಿದಾಗ ಎಲ್ಲೋ ಅಡಗಿ ಕುಳಿತುಕೊಳ್ಳುತ್ತಿದ್ದೆ ಎಂದು ಹೇಳಿದರು.