ಬಿಡಾಡಿ ದನ ಹಿಡಿಯಲು ಬಂದ ಬೆಳಗಾವಿ ಪಾಲಿಕೆ ಸಿಬ್ಬಂದಿ ಮೇಲೆ ಸ್ಥಳೀಯ ಯುವಕರಿಂದ ಹಲ್ಲೆ ಯತ್ನ - ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
🎬 Watch Now: Feature Video
ಬಿಡಾಡಿ ದನ ಹಿಡಿಯಲು ತೆರಳಿದ್ದ ಮಹಾನಗರ ಪಾಲಿಕೆ ಸಿಬ್ಬಂದಿ ಮೇಲೆ ಸ್ಥಳೀಯ ಯುವಕರು ಹಲ್ಲೆಗೆ ಯತ್ನ ನಡೆಸಿರುವ ಘಟನೆ ಕ್ಯಾಂಪ್ ಪ್ರದೇಶದಲ್ಲಿ ನಡೆದಿದೆ. ಪಾಲಿಕೆ ಆದೇಶದ ಮೇರೆಗೆ ಬಿಡಾಡಿ ದನಗಳನ್ನು ಹಿಡಿಯಲು ಬಂದ ಸಿಬ್ಬಂದಿ ಮೇಲೆ ಇಬ್ಬರು ಯುವಕರು ನಡೆಸಿದ ಹಲ್ಲೆ ಯತ್ನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.