ದಿಲ್ಲಿಯಲ್ಲಿ ಜೈ ಶ್ರೀರಾಮ್ ಘೋಷಣೆ ಮೂಲಕ ರಾಣಾ ದಂಪತಿಗೆ ಸ್ವಾಗತ.. 'ಈಟಿವಿ ಭಾರತ'ದೊಂದಿಗೆ ಸಂಸದೆ ಮಾತು - ದೆಹಲಿಯಲ್ಲಿ ನವನೀತ್ ಕೌರ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-15239692-thumbnail-3x2-wdfdfdf.jpg)
ನವದೆಹಲಿ: ತಮಗೆ ಆಗಿರುವ ಅನ್ಯಾಯದ ಬಗ್ಗೆ ದೂರು ನೀಡಲು ರಾಣಾ ದಂಪತಿ ಮಹಾರಾಷ್ಟ್ರದಿಂದ ದೆಹಲಿಗೆ ಆಗಮಿಸಿದ್ದು, ಜೈ ಶ್ರೀರಾಮ್ ಘೋಷಣೆ ಮೂಲಕ ಅವರನ್ನ ಬೆಂಬಲಿಗರು ಸ್ವಾಗತಿಸಿದ್ದಾರೆ. ಈ ಸಂದರ್ಭದಲ್ಲಿ 'ಈಟಿವಿ ಭಾರತ' ಜೊತೆ ಮಾತನಾಡಿರುವ ನವನೀತ್ ಕೌರ್ ರಾಣಾ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ವಾಗ್ದಾಳಿ ನಡೆಸಿದರು. ನನ್ನನ್ನು ಆರು ಗಂಟೆಗಳ ಕಾಲ ಲಾಕಪ್ನಲ್ಲಿ ಇರಿಸಲಾಗಿತ್ತು. ಜೈಲಿನಲ್ಲಿದ್ದ ವೇಳೆ ವೈದ್ಯರನ್ನ ಕರೆಸುವಂತೆ ಮನವಿ ಮಾಡಿದ್ರೂ, ಅವರು ನನ್ನ ಮಾತು ಕೇಳಿಲ್ಲ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಲೋಕಸಭೆ ಸ್ಪೀಕರ್ಗೆ ದೂರು ನೀಡುತ್ತೇನೆ ಎಂದರು. ಮಹಾರಾಷ್ಟ್ರ ಸಿಎಂ ವಿರುದ್ಧ ನನ್ನ ಹೋರಾಟ ಮುಂದುವರೆಯಲಿದೆ ಎಂಬ ಮಾತನ್ನು ಅವರು ತಿಳಿಸಿದರು.