ಕ್ಷೇತ್ರದ ಜನರ ಒಳಿತಿಗಾಗಿ ಖಾನಾಪುರ ಶಾಸಕಿಯಿಂದ ನವರಾತ್ರಿ ವ್ರತ - Belgaum Latest News Update
🎬 Watch Now: Feature Video
ಬೆಳಗಾವಿ: ನವರಾತ್ರಿ ನಿಮಿತ್ತ ಕೇತ್ರದ ಜನರ ಒಳಿತಿಗಾಗಿ 9 ದಿನಗಳ ಕಾಲ ಚಪ್ಪಲಿ ಹಾಕದೇ ಹಾಗೂ ಹಾಲು, ಹಣ್ಣುಗಳನ್ನು ಮಾತ್ರ ಸೇವಿಸುವ ಮೂಲಕ ಮೊದಲ ಬಾರಿಗೆ ವ್ರತ ಆಚರಣೆ ಮಾಡುತ್ತಿದ್ದೇನೆ ಎಂದು ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಡಿನ ಸಮಸ್ತ ಜನತೆಗೆ ನವರಾತ್ರಿ ಹಬ್ಬದ ಶುಭಾಶಯಗಳು. ಜೀವನದಲ್ಲಿ ಮೊದಲ ಬಾರಿಗೆ ವ್ರತ ಮಾಡುತ್ತಿದ್ದೇನೆ. ಕ್ಷೇತ್ರದ ಜನರಿಗೆ ಒಳತಿದಾದರೆ ಸಾಕೆಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು.