ಅತಿವೇಗದ ಚಾಲನೆ.. ಟಿಪ್ಪರ್ ಕೀ ಕಸಿದುಕೊಂಡು ರಸ್ತೆ ಸರಿ ಮಾಡುವಂತೆ ಶಾಸಕರ ತಾಕೀತು - ಈಟಿವಿ ಭಾರತ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16308602-thumbnail-3x2-yyy.jpg)
ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ): ಟಿಪ್ಪರ್ ಚಾಲಕನ ಅತಿವೇಗದ ಚಾಲನೆಯಿಂದ ಆಕ್ರೋಶಗೊಂಡ ಶಾಸಕ ಟಿ ವೆಂಕಟರಮಣಯ್ಯ, ಲಾರಿ ಕೀ ಕಸಿದುಕೊಂಡು ರಸ್ತೆ ಸರಿಪಡಿಸುವಂತೆ ತಾಕೀತು ಮಾಡಿರುವ ಘಟನೆ ನಡೆದಿದೆ. ಶಾಸಕ ಟಿ ವೆಂಕಟರಮಣಯ್ಯ ಕಾರ್ಯಕ್ರಮದ ನಿಮಿತ್ತ ಕನಕೇನಹಳ್ಳಿ ಮಾರ್ಗದಲ್ಲಿ ತೆರಳುತ್ತಿದ್ದರು. ಟಿಪ್ಪರ್ ಚಾಲಕನ ವೇಗದ ಚಾಲನೆ ಕಂಡು ಕಂಡು ಆತಂಕಗೊಂಡಿದ್ದಾರೆ. ಟಿಪ್ಪರ್ನ್ನು ತಡೆದ ಶಾಸಕರು ಚಾಲಕನನ್ನು ತರಾಟೆಗೆ ತೆಗೆದುಕೊಂಡರು. ಹಳೇಕೋಟೆ ಗ್ರಾಮದಲ್ಲಿ ಕಲ್ಲು ಗಣಿಗಾರಿಕೆಯ ಕ್ರಷರ್ ಗಳಿದ್ದು, ಕ್ರಷರ್ ನಿಂದ ಜಲ್ಲಿಕಲ್ಲು, ಎಂ ಸ್ಯಾಂಡ್ ತುಂಬಿಕೊಂಡು ಬರುವ ಟಿಪ್ಪರ್ ಚಾಲಕರು ಅತಿವೇಗವಾಗಿ ಚಾಲನೆ ಮಾಡುತ್ತಾರೆ. ಟಿಪ್ಪರ್ಗಳ ಅತಿಯಾದ ವೇಗ ಮತ್ತು ಮಿತಿ ಮೀರಿದ ಲೋಡ್ ಸಾಗಿಸುವುದರಿಂದ ರಸ್ತೆಗಳು ಹಾಳಾಗಿವೆ. ಹಳ್ಳ ಬಿದ್ದ ರಸ್ತೆಗಳಿಂದ ವಾಹನ ಸವಾರರು ಪ್ರಾಣ ಕಳೆದುಕೊಂಡಿದ್ದಾರೆ. ಈ ಕೂಡಲೇ ರಸ್ತೆ ಸರಿಪಡಿಸುವಂತೆ ಚಾಲಕನಿಗೆ ಶಾಸಕರು ತಾಕೀತು ಮಾಡಿದರು. ಎರಡು ದಿನಗಳ ಹಿಂದೆ ಮೂಗೇನಹಳ್ಳಿ ಬಳಿ ಬಿಬಿಎಂಪಿ ಕಸದ ಲಾರಿಗೆ ಸಿಲುಕಿ ಯುವಕ ಸಾವನ್ನಪ್ಪಿದ್ದ.