ವಿಡಿಯೋ: 'ಅಶ್ವಮೇಧ' ಚಿತ್ರದ ಹಾಡು ಹೇಳಿ ಸ್ಟೇಜ್ ಮೇಲೆ ಧೂಳ್ ಎಬ್ಬಿಸಿದ ಶಾಸಕ ಎಸ್. ಕುಮಾರ್ ಬಂಗಾರಪ್ಪ - ಸೊರಬ ಶಾಸಕ ಎಸ್ ಕುಮಾರ್ ಬಂಗಾರಪ್ಪ
🎬 Watch Now: Feature Video

ಶಿವಮೊಗ್ಗ: ನಗರದ ಡಾ. ರಾಜ್ ಕಲಾಕ್ಷೇತ್ರದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಾಸಕ ಎಸ್. ಕುಮಾರ್ ಬಂಗಾರಪ್ಪ ಹಾಡು ಹೇಳುವ ಮೂಲಕ ಅಭಿಮಾನಿಗಳನ್ನು ಹಾಗು ಮಹಿಳಾ ಸ್ವಸಹಾಯ ಸಂಘದ ಸದಸ್ಯರನ್ನು ರಂಜಿಸಿದರು. ನಾಯಕ ನಟರಾಗಿ ಕುಮಾರ್ ಬಂಗಾರಪ್ಪ ಅಭಿನಯಿಸಿದ ಸೂಪರ್ ಹಿಟ್ ಚಲನಚಿತ್ರ "ಅಶ್ವಮೇಧ" ಚಿತ್ರದ 'ಹೃದಯ ಸಮುದ್ರ ಕಲಕಿ ಹೊತ್ತಿದೆ ದ್ವೇಷದ ಬೆಂಕಿ' ಎಂಬ ಗೀತೆಯನ್ನು ಹಾಡುವ ಮೂಲಕ ಗಮನ ಸೆಳೆದರು. ಅಭಿಮಾನಿಗಳ ಒತ್ತಾಯಕ್ಕೆ ಮಣಿದ ಶಾಸಕರು, ತಮ್ಮದೇ ಚಿತ್ರದ ಹಾಡು ಹೇಳುತ್ತಿದ್ದಂತೆ ಕೇಕೆ, ಶಿಳ್ಳೆ ಮೂಲಕ ಚಪ್ಪಾಳೆಯ ಸುರಿಮಳೆಗೈದರು. ಅಂದ ಹಾಗೆ 'ಅಶ್ವಮೇಧ' ಚಿತ್ರದ ಎಲ್ಲಾ ಗೀತೆಗಳನ್ನು ದೊಡ್ಡರಂಗೇಗೌಡರು ಬರೆದಿದ್ದು, ಹೃದಯ ಸಮುದ್ರ ಕಲಕಿ ಹಾಡಿಗೆ ವರನಟ ಡಾ. ರಾಜ್ ಕುಮಾರ್ ಕಂಠದಾನ ಮಾಡಿದ್ದರು.