ತಂತ್ರಗಾರಿಕೆ ಫಲಿಸಿದೆ: ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ - ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್
🎬 Watch Now: Feature Video
ಮೈಸೂರು ಮಹಾನಗರ ಪಾಲಿಕೆಯ ಮೇಯರ್ - ಉಪ ಮೇಯರ್ ಎರಡು ಸ್ಥಾನವನ್ನು ಗೆಲ್ಲಲು ತಂತ್ರಗಾರಿಕೆ ರೂಪಿಸಿದ್ದೆವು. ಅದು ಫಲಿಸಿತು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಈಟಿವಿ ಭಾರತ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ಈ ಬಾರಿ ಮೇಯರ್ ಸ್ಥಾನವನ್ನು ಹಾಗೂ ಉಪ ಮೇಯರ್ ಸ್ಥಾನವನ್ನು ಪಡೆಯಲು ಸಂಸದರು, ಶಾಸಕರು ಹಾಗೂ ಪಾಲಿಕೆಯ ಸದಸ್ಯರು ಸೇರಿ ತಂತ್ರಗಾರಿಗೆ ಮಾಡಿದ್ದೆವು. ಚುನಾವಣಾ ಉಸ್ತುವರಿಯಾಗಿ ಆಗಮಿಸಿದ ಸುರಾನಾ ತಂತ್ರಗಾರಿಕೆ ಮಾಡಿದ್ದು, ಮೂರು ಬಾರಿ ಆಯ್ಕೆಯಾದ ಶಿವಕುಮಾರ್ ಅವರನ್ನು ಮೇಯರ್ ಆಗಿ ಹಾಗೂ ರೂಪಾ ಅವರನ್ನು ಉಪ ಮೇಯರ್ ಆಗಿ ಮಾಡುವಲ್ಲಿ ಶ್ರಮಿಸಿದರು. ನಾವು ಮಾಡಿದ ತಂತ್ರಗಾರಿಕೆ ಫಲಿಸಿದ್ದು, ಇದು ಮುಂದಿನ 2023 ರ ವಿಧಾನಸಭಾ ಚುನಾವಣೆಯ ಶುಭ ಸೂಚನೆ ಎಂದರು.